ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ತ್ವರಿತ ಇಎಂಐ ಸೇವೆಯನ್ನು ಪಡೆಯಲಿದ್ದಾರೆ. ಇದಕ್ಕೆ ಬ್ಯಾಂಕ್ ಇಎಂಐ @ ಇಂಟರ್ನೆಟ್ ಬ್ಯಾಂಕಿಂಗ್ ಎಂದು ಹೆಸರಿಟ್ಟಿದೆ. ಈ ಬ್ಯಾಂಕ್ ಸೌಲಭ್ಯದ ಸಹಾಯದಿಂದ ಗ್ರಾಹಕರು ಡಿಜಿಟಲ್ ರೀತಿಯಲ್ಲಿ ಇಎಂಐ ಪ್ರಯೋಜನವನ್ನು ಪಡೆಯಲಿದ್ದಾರೆ.
ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತ್ವರಿತ ಇಎಂಐ ಸೌಲಭ್ಯವನ್ನು ನೀಡುವ ಮೊದಲ ಬ್ಯಾಂಕ್ ಇದಾಗಿದೆ. ಇದಕ್ಕೂ ಮುನ್ನ ಯಾವುದೇ ಬ್ಯಾಂಕ್ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡಿಲ್ಲ. ಈ ಸೇವೆಗಾಗಿ ಬ್ಯಾಂಕ್ BillDesk ಮತ್ತು Razorpay ಜೊತೆ ಒಪ್ಪಂದ ಮಾಡಿಕೊಂಡಿದೆ.
ಮೊದಲು ಬ್ಯಾಂಕ್ ವೆಬ್ಸೈಟ್ ಗೆ ಹೋಗಬೇಕು. ICICI Bank Internet Banking ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಐಡಿ ಮತ್ತು ಪಾಸ್ವರ್ಡ್ ಹಾಕಬೇಕು. ನಂತ್ರ Convert to EMI instantly ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಪಾವತಿ ಆಯ್ಕೆ ಮಾಡಿ, ನೋಂದಾಯಿತ ಮೊಬೈಲ್ ಗೆ ಬರುವ ಒಟಿಪಿ ಹಾಕಿದ್ರೆ ಪೇಮೆಂಟ್ ಆಗಲಿದೆ.
ಬ್ಯಾಂಕ್ ನ ಈ ಸೇವೆ ಮೂಲಕ ಗ್ರಾಹಕರು 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗಿನ ಉತ್ಪನ್ನಗಳನ್ನು ಖರೀದಿಸಬಹುದು. ಗ್ರಾಹಕರು ಮೂರು ತಿಂಗಳು, ಆರು ತಿಂಗಳು, ಒಂಬತ್ತು ತಿಂಗಳು ಮತ್ತು 12 ತಿಂಗಳುಗಳಲ್ಲಿ ಇಎಂಐಗಾಗಿ ಯಾವುದೇ ಆಯ್ಕೆಯನ್ನು ಆಯ್ಕೆ ಮಾಡಬಹುದು.