
ಮನೆ ಖರೀದಿಗೆ ಆಲೋಚನೆ ಮಾಡ್ತಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಎಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ನಂತರ ಈಗ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಿದೆ. ಐಸಿಐಸಿಐ ಬ್ಯಾಂಕ್ ಇಂದು ತನ್ನ ಗೃಹ ಸಾಲದ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ.
ಐಸಿಐಸಿಐ ಬ್ಯಾಂಕ್ ಗೃಹ ಸಾಲ ಬಡ್ಡಿದರವನ್ನು ಶೇಕಡಾ 6.70ಕ್ಕೆ ಇಳಿಸಿದೆ. ಐಸಿಐಸಿಐ ಬ್ಯಾಂಕ್ ಈಗ ಶೇಕಡಾ 6.70 ರಷ್ಟು ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡಲಿದೆ. ಬ್ಯಾಂಕಿನ ಹೊಸ ದರಗಳು ಮಾರ್ಚ್ 5ರಿಂದ ಜಾರಿಗೆ ತಂದಿದೆ. ಕಳೆದ 10 ವರ್ಷಗಳ ನಂತ್ರ ಐಸಿಐಸಿಐ ಬ್ಯಾಂಕ್ ಅಗ್ಗದ ಗೃಹ ಸಾಲವನ್ನು ನೀಡ್ತಿದೆ.
ಬ್ಯಾಂಕಿನ ಗ್ರಾಹಕರು ಈ ಬಡ್ಡಿ ದರದಲ್ಲಿ 75 ಲಕ್ಷ ರೂಪಾಯಿವರೆಗೆ ಸಾಲ ತೆಗೆದುಕೊಳ್ಳಬಹುದು. 75 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲಕ್ಕಾಗಿ ಗ್ರಾಹಕರು ಶೇಕಡಾ 6.75 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಪರಿಷ್ಕೃತ ಗೃಹ ಸಾಲದ ಬಡ್ಡಿದರ ಮಾರ್ಚ್ 31ರವರೆಗೆ ಲಭ್ಯವಾಗಲಿದೆ. ಗ್ರಾಹಕರು ಐ ಮೊಬೈಲ್ ಪೇ ಮೂಲಕ ಸಾಲ ಪಡೆಯಬಹುದು.