ಹ್ಯುಂಡೈ ತನ್ನ ಮತ್ತೊಂದು ಅಲ್ಟಿಮೇಟ್ ಮೊಬಿಲಿಟಿ ವಾಹನವನ್ನ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ರೀತಿಯ ವಾಹನವನ್ನ ಇದೇ ಮೊದಲ ಬಾರಿಗೆ ವಿನ್ಯಾಸಗೊಳಿಸಲಾಗ್ತಿದೆ. ಈ ವಾಹನಕ್ಕೆ ಟೈಗರ್ (ಟ್ರಾನ್ಸ್ಫಾರ್ಮಿಂಗ್ ಇಂಟೆಲಿಜೆಂಟ್ ಗ್ರೌಂಡ್ ಎಕ್ಸ್ಸೈಸ್ ರೊಬೋಟ್) ಎಂದು ಹೆಸರಿಡಲಾಗಿದೆ. ಟ್ರಾನ್ಸ್ಫಾಮರ್ಸ್ ಚಿತ್ರದಲ್ಲಿ ಒಂದು ಕಾಲದಲ್ಲಿ ಪರದೆಯ ಮೇಲೆ ತೋರಿಸ್ದನ್ನ ಈಗ ಹ್ಯುಂಡೈನ ಕಾನ್ಸೆಪ್ಟ್ ವಾಹನದೊಂದಿಗೆ ರಸ್ತೆಗಿಳಿಸಲು ಸಿದ್ಧತೆ ನಡೆದಿದೆ. ಈ ರೋಬೋಟ್ನ್ನು ವಿವಿಧ ರೀತಿಯ ಪೇಲೋಡ್ಗಳನ್ನ ಸಾಗಿಸೋಕೆ ಬಳಸಲಾಗಿದೆ.
ಎಷ್ಟೇ ಆಧುನಿಕ ವಿನ್ಯಾಸದ ಕಾರುಗಳು ಮಾರುಕಟ್ಟೆಗೆ ಬಂದರೂ ಸಹ ದುರ್ಗಮ ಮಾರ್ಗಗಳಲ್ಲಿ ಇವು ಸಂಚರಿಸಲಾರವು. ಆದರೆ ಟೈಗರ್ ವಿಶೇಷತೆ ಏನು ಅಂದ್ರೆ, ಆಪತ್ತಿನ ಕಾಲದಲ್ಲಿ ಸಹಾಯತಾ ಪ್ಯಾಕೇಜ್ ನೀಡಲಿಕ್ಕಾಗಿ ನಿಯೋಜನೆ ಮಾಡಲಾಗಿದೆ. ಮಾಡ್ಯೂಲೈಸರ್ ಪ್ಲೇಟ್ಫಾರಂ ಆರ್ಕಿಟೆಕ್ಚರ್ನ ಆಧಾರದಲ್ಲಿ, ಟೈಗರ್ನಲ್ಲಿ ಒಂದು ರೋಬೋಟ್ ಮಾದರಿಯ ಕಾಲು ಹಾಗೂ ಚಕ್ರದ ಸಿಸ್ಟಂ ಇಡಲಾಗಿದೆ. ಇದು 360 ಡಿಗ್ರಿ ಡೈರೆಕ್ಷನಲ್ ಕಂಟ್ರೋಲ್ ಹಾಗೂ ಅವಶ್ಯಕ ಸೆನ್ಸಾರ್ಗಳನ್ನ ಹೊಂದಿದೆ.
ಇದರ ಕಾಲಿನ ವಿಶೇಷತೆ ಏನು ಅಂದ್ರೆ ಇದು ಎಂತಹ ಪ್ರದೇಶವನ್ನೂ ಏರಬಲ್ಲದು . ಅಂದರೆ ಎತ್ತರದ ಪರ್ವತಗಳನ್ನೂ ಭಾರದ ವಸ್ತುಗಳನ್ನ ಇರಿಸಿಕೊಂಡು ಏರುವ ಸಾಮರ್ಥ್ಯ ಟೈಗರ್ಗಿದೆ. ಈ ಟೈಗರ್ನ್ನು ಪೂರ್ತಿ ಚಾರ್ಜ್ ಮಾಡಿ ಬೇರೆ ಯಾವುದೇ ಗಾಡಿಯ ಜೊತೆ ಕನೆಕ್ಟ್ ಮಾಡಬಹುದಾಗುದೆ. ಈ ಟೈಗರ್ ಅನ್ನು ಹ್ಯುಂಡೈನ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ನ್ಯೂ ಹೊರೈಜನ್ಸ್ ಸ್ಟುಡಿಯೋ ಅಭಿವೃದ್ಧಿಪಡಿಸುತ್ತಿದೆ. ಇದು ಹ್ಯುಂಡೈ ಮೋಟಾರ್ ಗ್ರೂಪ್ನ ಒಂದು ವಿಭಾಗವಾಗಿದ್ದು, ಸಾಮಾನ್ಯ ಕಾರುಗಳು ಮತ್ತು ಟ್ರಕ್ಗಳಿಗೆ ಸಾಧ್ಯವಾಗದ ಸ್ಥಳಗಳಿಗೆ ಹೋಗಬಹುದಾದ ವಾಹನಗಳನ್ನು ವಿನ್ಯಾಸಗೊಳಿಸುತ್ತದೆ.ಆದರೆ ಈ ವಾಹನದಲ್ಲಿ ಕೇವಲ ಸರಕು ಸಾಮಗ್ರಿಗಳನ್ನ ಮಾತ್ರ ಸಾಗಿಸಬಹುದಾಗಿದೆ.