ಮೈಕ್ರೋಸಾಫ್ಟ್ನಲ್ಲಿ ವಾರ್ಷಿಕ ಎರಡು ಕೋಟಿ ರೂ. ವೇತನದ ಉದ್ಯೋಗವೊಂದಕ್ಕೆ ಆಯ್ಕೆಯಾದ ಹೈದರಾಬಾದ್ ನಿವಾಸಿ ದೀಪ್ತಿ ನಾರ್ಕುತಿ ಭಾರೀ ಸದ್ದು ಮಾಡುತ್ತಿದ್ದಾರೆ.
ಸಾಫ್ಟ್ವೇರ್ ಅಭಿವೃದ್ಧಿ ಇಂಜಿನಿಯರ್ ಆಗಿ ಮೈಕ್ರೋಸಾಫ್ಟ್ನ ಪ್ರಧಾನ ಕಾರ್ಯಾಲಯವಿರುವ ಅಮೆರಿಕದ ಸಿಯಾಟಲ್ನಲ್ಲಿ ದೀಪ್ತಿ ಕೆಲಸ ಮಾಡಲಿದ್ದಾರೆ.
ಫ್ಲಾರಿಡಾ ವಿವಿಯಲ್ಲಿ ಗಣಕವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಮುಗಿಯುವ ಮುನ್ನವೇ ದೀಪ್ತಿಗೆ ಎಎಎ ಶ್ರೇಣಿಯ ಅನೇಕ ಕಂಪನಿಗಳಿಗೆ ಭಾರೀ ವೇತನದ ಕೆಲಸದ ಆಫರ್ಗಳು ಬಂದಿದ್ದವು. ಅಮೇಜಾನ್, ಗೋಲ್ಡ್ಮನ್ & ಸಚ್ಸ್ ಸೇರಿದಂತೆ ಅನೇಕ ಕಂಪನಿಗಳು ದೀಪ್ತಿ ಮುಂದೆ ಭಾರೀ ವೇತನದ ಆಫರ್ ಇಟ್ಟಿದ್ದವು. ಫ್ಲಾರಿಡಾ ವಿವಿಯ ಕ್ಯಾಂಪಸ್ ಸಂದರ್ಶನದಲ್ಲಿ ಭಾಗಿಯಾಗಿದ್ದ 300 ವಿದ್ಯಾರ್ಥಿಗಳ ಪೈಕಿ ಅತಿ ದೊಡ್ಡ ವೇತನಕ್ಕೆ ಭಾಜನರಾದ ಶ್ರೇಯ ದೀಪ್ತಿಗೆ ಸೇರಿದೆ.
Yellow Alert: ಚಂಡಮಾರುತ ಅಬ್ಬರ ಕಡಿಮೆಯಾದರೂ ಎರಡು ದಿನ ಭಾರೀ ಮಳೆ
2014-15ರಲ್ಲಿ ಮೈಕ್ರೋಸಾಫ್ಟ್ನಲ್ಲಿ ವಿದ್ಯಾರ್ಥಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ದೀಪ್ತಿ, ಮೇ 17ರಿಂದ ತಮ್ಮ ಹೊಸ ಉದ್ಯೋಗವನ್ನು ಆರಂಭಿಸಲಿದ್ದಾರೆ. ಕೋಡಿಂಗ್ ವಿಷಯದಲ್ಲಿ ಭಾರೀ ಆಸಕ್ತಿ ಹೊಂದಿರುವ ದೀಪ್ತಿ ತಂದೆ ಡಾ. ವೆಂಕಣ್ಣ ಅವರು ಹೈದರಾಬಾದ್ ಪೊಲೀಸ್ ಇಲಾಖೆಯಲ್ಲಿ ವಿಧಿವಿಜ್ಞಾನ ತಜ್ಞರಾಗಿದ್ದಾರೆ.
ಹೈದರಾಬಾದ್ನ ಒಸ್ಮಾನಿಯಾ ವಿವಿಯಲ್ಲಿ ಬಿಟೆಕ್ ಪದವಿ ಪೂರೈಸಿದ ದೀಪ್ತಿ, ಜೆಪಿ ಮೊರ್ಗನ್ನಲ್ಲಿ ಕೆಲಸಕ್ಕೆ ಸೇರಿದ್ದರು. ಮೂರು ವರ್ಷ ಈ ಕೆಲಸ ಮಾಡಿದ ಬಳಿಕ ಉನ್ನತ ಶಿಕ್ಷಣ ಪೂರೈಸಲು ನಿರ್ಧರಿಸಿದ ದೀಪ್ತಿ, ಫ್ಲಾರಿಡಾ ವಿವಿಯಲ್ಲಿ ಸ್ಕಾಲರ್ಶಿಪ್ ಪಡೆದುಕೊಂಡು ಎಂ.ಎಸ್. ಮಾಡಲು ಅಮೆರಿಕದ ವಿಮಾನವೇರಿದ್ದರು.