![](https://kannadadunia.com/wp-content/uploads/2018/06/aadhaar-card-image.jpg)
ಇನ್ನು ಈ ಆಧಾರ್ ಕಾರ್ಡ್ನಲ್ಲಿ ಯಾವುದೇ ಬದಲಾವಣೆ ಮಾಡಬೇಕು ಅಂದರೆ ನೀವು ಯುಐಡಿಎಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಬದಲಾವಣೆ ಮಾಡಬಹುದಾಗಿದೆ. ಇಲ್ಲವಾದಲ್ಲಿ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿಯೂ ಬದಲಾವಣೆಗಳನ್ನ ಮಾಡಬಹುದು.
ನಿಮ್ಮ ಆಧಾರ್ ಕಾರ್ಡ್ನಲ್ಲಿ ಯಾವುದೇ ಬದಲಾವಣೆಗಳನ್ನ ಮಾಡಬೇಕೆಂದು ನೀವು ಬಯಸಿದ್ದರೆ ಹತ್ತಿರ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಅಗತ್ಯ ಬದಲಾವಣೆಗಾಗಿ ಈ ಕೆಳಗೆ ತಿಳಿಸಲಾದ ಹಂತಗಳನ್ನ ಅನುಸರಿಸಿ.
1. ನಿಮ್ಮ ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.
2. ಯುಐಡಿಎಐ ವೆಬ್ಸೈಟ್ನಲ್ಲಿ ಆಧಾರ್ ಎನ್ರೋಲ್ಮೆಂಟ್ ಫಾರ್ಮ್ನ್ನು ಡೌನ್ಲೋಡ್ ಮಾಡಿ. ಹಾಗೂ ಫಾರ್ಮ್ನಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನ ನೀಡಿ.
3. ಇದಾದ ಬಳಿಕ ಈ ಫಾರ್ಮ್ನ್ನು ಅಧಿಕಾರಿಗೆ ನೀಡಿ. ಹಾಗೂ ನಿಮ್ಮ ಬಯೋಮೆಟ್ರಿಕ್ ದಾಖಲೆಗಳನ್ನೂ ಒದಗಿಸಿ.
4. ಈಗ ಆಧಾರ್ ಕೇಂದ್ರದ ಸಿಬ್ಬಂದಿ ನಿಮ್ಮ ಫೋಟೋವನ್ನ ತೆಗದುಕೊಳ್ಳುವ ಮೂಲಕ ನೀವು ಒದಗಿಸಿದ ದಾಖಲೆಗಳನ್ನ ದೃಢೀಕರಿಸುತ್ತಾರೆ.
5. ಆಧಾರ್ನಲ್ಲಿ ಯಾವುದೇ ದಾಖಲೆಗಳನ್ನ ನವೀಕರಿಸಲು ಹಣ ಪಾವತಿಸಬೇಕು.
6. ಯುಆರ್ಎನ್ ಹೊಂದಿರುವ ಸ್ವೀಕೃತಿ ಪತ್ರವನ್ನ ನಿಮಗೆ ನೀಡಲಾಗುತ್ತೆ.
7. ಈ ಯುಆರ್ಎನ್ ಸಂಖ್ಯೆಯನ್ನ ಬಳಸಿ ನೀವು ಆಧಾರ್ ಮಾಹಿತಿ ನವೀಕರಣಗೊಂಡಿದೆಯೇ ಇಲ್ಲವೇ ಎಂಬುದನ್ನ ಪರಿಶೀಲಿಸಬಹುದು.
ಆಧಾರ್, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್: ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ ‘ಸಮೃದ್ಧಿ ಯೋಜನೆ’ಯಡಿ ಪ್ರೋತ್ಸಾಹಧನ
ನವೀಕರಣಗೊಂಡ ಆಧಾರ್ ಕಾರ್ಡ್ ಪಡೆಯುವುದು ಹೇಗೆ..?
1. ಆಧಾರ್ ಕಾರ್ಡ್ನಲ್ಲಿ ಒಮ್ಮೆ ನಿಮ್ಮ ಫೋಟೋ ಅಪ್ಡೇಟ್ ಆಯ್ತು ಅಂದರೆ ನೀವು ಇದನ್ನ ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಬಹುದಾಗಿದೆ.
2. ಯುಐಡಿಎಐ ವೆಬ್ಸೈಟ್ಗೆ ಮೊದಲು ಲಾಗಿನ್ ಆಗಿ.
3. ನಿಮಗೆ ಸಾಮಾನ್ಯ ಆಧಾರ್ ಕಾರ್ಡ್ ಇಲ್ಲವೇ ಡಿಜಿಟ್ಗಳನ್ನ ಗೌಪ್ಯವಾಗಿಡುವ ಆಧಾರ್ ಕಾರ್ಡ್ಗಳನ್ನ ಡೌನ್ಲೋಡ್ ಮಾಡುವ ಆಯ್ಕೆ ನೀಡಲಾಗುತ್ತೆ.
4. ಮೊಬೈಲ್ ಆಧಾರ್ ಅಪ್ಲಿಕೇಶನ್ನಲ್ಲಿ ನೀವು ಹೊಸ ದಾಖಲೆಗಳನ್ನ ನೀಡಬೇಕು.
5. ಡಿಜಿ ಲಾಕರ್ ಅಪ್ಲಿಕೇಶನ್ನಲ್ಲಿಯೂ ನೀವು ಆಧಾರ್ ಮಾಹಿತಿ ನವೀಕರಿಸಬಹುದು.