ಹರಿದು ಹೋದ ನೋಟುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ.
ಹೌದು, ಹಾಳಾದ ನೋಟುಗಳನ್ನು ಬದಲಿಸಿಕೊಳ್ಳಲು ಹೋದಾಗ, ಬ್ಯಾಂಕ್ ನಲ್ಲಿ ಬದಲಾಯಿಸಲು ಅನೇಕ ತೊಂದರೆ ಹಾಗೂ ಎಷ್ಟು ಮೊತ್ತದ ಹಣವನ್ನು ನೀಡಬೇಕು ಎನ್ನುವ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇರಲಿಲ್ಲ. ಆದರೆ ಆರ್.ಬಿ.ಐ. ಇದಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಐವತ್ತು ರೂಪಾಯಿಗಿಂತ ಕಡಿಮೆ ಮುಖಬೆಲೆಯ ನೋಟುಗಳು ಸಂಪೂರ್ಣವಾಗಿ ಹಾಳಾಗಿದ್ದರೂ ಶೇ.100 ರಷ್ಟು ಹಣ ವಾಪಾಸು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಿಂತ ಹೆಚ್ಚು ಮೌಲ್ಯದ ನೋಟು ಶೇ.80 ರಷ್ಟು ಇದ್ದರೆ, ಸಂಪೂರ್ಣ ಹಣ ಪಾವತಿ ಹಾಗೂ 40-80 ರಷ್ಟು ಇದ್ದರೆ ಆರ್ಧ ಮೊತ್ತ ನೀಡಲಾಗುವುದು.
ಮರುಪಾವತಿಯನ್ನು ಒಂದೇ ದಿನದಲ್ಲಿ ನೀಡಬೇಕಿದ್ದು, ಇಂಟರ್ನೆಟ್ ಬ್ಯಾಂಕಿಂಗ್, ಚೆಕ್ ಅಥವಾ ಡಿಡಿ ಮೂಲಕವೂ ಹರಿದ ನೋಟುಗಳ ಮೌಲ್ಯದ ಹಣ ನೀಡಬಹುದಾಗಿದೆ.