ನಿಮ್ಮ ಬಳಿ ಆಧಾರ್ ಇದ್ರೆ ಚಿಂತಿಸುವ ಅಗತ್ಯವಿಲ್ಲ. ಆಧಾರ್ ಮೂಲಕ ಹಣ ವಿತ್ ಡ್ರಾ ಮಾಡಬಹುದು. ಆದ್ರೆ ಇದಕ್ಕೊಂದು ಷರತ್ತಿದೆ. ನಿಮ್ಮ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ ಆಗಿರಬೇಕು.
ಗ್ರಾಹಕರು ಎಇಪಿಎಸ್ ಸೇವೆಯ ಮೂಲಕ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಮೊತ್ತವನ್ನು ಹಿಂಪಡೆಯಬಹುದು. ಸದ್ಯ ಕೋಟ್ಯಾಂತರ ಜನರು ಎಟಿಎಂ ಕಾರ್ಡ್, ಪಿನ್ ಇಲ್ಲದೆ ಹಣ ವಿತ್ ಡ್ರಾ ಮಾಡ್ತಿದ್ದಾರೆ.ಇಷ್ಟು ದಿನ ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲಾಗ್ತಿತ್ತು. ಆದ್ರೆ ಈಗ ಕಾರ್ಡ್ ಇಲ್ಲದೆ ಆಧಾರ್ ಮೂಲಕವೇ ಹಣ ವಿತ್ ಡ್ರಾ ಮಾಡಬಹುದು.
ಹಣ ವಿತ್ ಡ್ರಾ ಮಾಡುವುದಲ್ಲದೆ ನಗದು ಪಾವತಿ, ಬ್ಯಾಲೆನ್ಸ್ ಚೆಕ್ ಸೇರಿದಂತೆ ಪಾನ್ ಕಾರ್ಡ್, ಇ-ಕೆವೈಸಿ ಮತ್ತು ಸಾಲ ವಿತರಣೆಯಂತಹ ಸೌಲಭ್ಯಗಳನ್ನು ಸಹ ಪಡೆಯಬಹುದು. ಆಧಾರ್ ಆಧಾರಿತ ಪಾವತಿ ಸೌಲಭ್ಯವನ್ನು ರಾಷ್ಟ್ರೀಯ ಪಾವತಿ ನಿಗಮ ಸಿದ್ಧಪಡಿಸಿದೆ. ಈ ಮೂಲಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಸೇವೆಗಳನ್ನು ಒದಗಿಸಲು ಆಧಾರ್ ಸಂಖ್ಯೆ ಮತ್ತು ಯುಐಡಿಎಐ ದೃಢೀಕರಣವನ್ನು ಬಳಸುತ್ತವೆ. ಇದಕ್ಕೆ ಆರ್‌ಬಿಐ ಮಾನ್ಯತೆ ಕೂಡ ಸಿಕ್ಕಿದೆ. ಈ ವ್ಯವಸ್ಥೆಯಲ್ಲಿ ಫಿಂಗರ್‌ಪ್ರಿಂಟ್ ಮತ್ತು ಮೊಬೈಲ್ ಸಂಖ್ಯೆ, ಡೆಬಿಟ್ ಕಾರ್ಡ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದಕ್ಕಾಗಿ ಪಿನ್ ನಮೂದಿಸುವ ಅಗತ್ಯವಿಲ್ಲ. ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿದ್ದರೆ ಸೌಲಭ್ಯದ ಲಾಭವನ್ನು ಪಡೆಯಬಹುದು.