![](https://kannadadunia.com/wp-content/uploads/2020/11/133204-whatsapp-disappearing-messages-1024x575.jpg)
ಇದೀಗ ವಾಟ್ಸಾಪ್ನಲ್ಲಿ ಡಿಸಪಿಯರಿಂಗ್ ಆಪ್ಶನ್ ನೀಡಲಾಗಿದ್ದು ಈ ಆಪ್ಶನ್ನ್ನ ನೀವು ಆನ್ ಮಾಡಿದರೆ ಒಂದು ವಾರದಲ್ಲಿ ನಿಮ್ಮ ಎಲ್ಲ ಮೆಸೇಜ್ಗಳು ಅಳಿಸಿ ಹೋಗಲಿವೆ. ಆದರೆ ಫೋಟೋ, ವಿಡಿಯೋಗಳು ಮಾತ್ರ ನಿಮ್ಮ ಮೊಬೈಲ್ ಗ್ಯಾಲರಿಯಲ್ಲಿ ಹಾಗೆಯೇ ಉಳಿಯಲಿದೆ. ಹಾಗಾದ್ರೆ ಈ ಆಪ್ಶನ್ ಹೇಗೆ ಆನ್ ಮಾಡಬಹುದು ಅನ್ನೋದನ್ನ ನೋಡೋದಾದ್ರೆ…
ವಾಟ್ಸಾಪ್ನಲ್ಲಿ ಕಾಂಟ್ಯಾಕ್ಟ್ ಹೆಸರಿನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಡಿಸಪಿಯರಿಂಗ್ ಮೆಸೇಜ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ ಕಂಟಿನ್ಯೂ ಅಂತಾ ಪ್ರೆಸ್ ಮಾಡಿ. ಈಗ ನಿಮ್ಮ ವಾಟ್ಸಾಪ್ನಲ್ಲಿ ಈ ಹೊಸ ಆಯ್ಕೆ ಕೆಲಸ ಮಾಡಲು ಆರಂಭಿಸುತ್ತೆ.
ನೀವು ಈ ಆಯ್ಕೆಯನ್ನ ಯಾವಾಗ ಬೇಕಿದ್ದರೂ ಬಂದ್ ಮಾಡಬಹುದು. ನೀವು ಆಪ್ಶನ್ ಆಫ್ ಮಾಡಿದ್ದರೆ ನಿಮ್ಮ ಮೊಬೈಲ್ನಲ್ಲಿ ಹಳೆಯ ಚಾಟ್ಗಳು ಹಾಗೆಯೇ ಉಳಿಯಲಿದೆ.