ಕೊರೊನಾ ವಿಶ್ವದ ಚಿತ್ರಣ ಬದಲಿಸಿದೆ. ಕೊರೊನಾ ನಂತ್ರದ ಬದುಕು ಬದಲಾಗ್ತಿದೆ. ಎಲ್ಲ ಕಡೆ ಸ್ಯಾನಿಟೈಜರ್ ಮಾಡೋದು ಈಗ ಅನಿವಾರ್ಯವಾಗಿದೆ. ಕಾರ್, ಕಚೇರಿ, ರೈಲ್ವೆ ನಿಲ್ದಾಣ, ಕಟ್ಟಡಗಳು ಸೇರಿದಂತೆ ಅನೇಕ ಕಡೆ ಸ್ಯಾನಿಟೈಜರ್ ಮೂಲಕ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ.
ಈ ಸಮಯದಲ್ಲಿ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸುವ ಅವಕಾಶವಿದೆ. ಸ್ಯಾನಿಟೈಜರ್ ಮಾಡುವ ಕೆಲಸವನ್ನು ನೀವು ಆಯ್ದುಕೊಳ್ಳಬಹುದು. ದ್ವಿ ಚಕ್ರ ವಾಹನ ಸ್ಯಾನಿಟೈಜರ್ ಮಾಡಲು 15-20 ನಿಮಿಷ ಬೇಕು. ಇದ್ರಲ್ಲಿ ನಿಮಗೆ 40-60 ರೂಪಾಯಿಗಳು ಆರಾಮವಾಗಿ ಸಿಗುತ್ತವೆ. ಇದಕ್ಕಿಂತ ಹೆಚ್ಚು ಹಣವನ್ನೂ ನೀವು ಪಡೆಯಬಹುದು.
4 ವೀಲರ್ ಸ್ವಚ್ಛಗೊಳಿಸಲು ನಿಮಗೆ 20-25 ನಿಮಿಷಗಳು ಬೇಕು. ಇದಕ್ಕೆ 500 ರೂಪಾಯಿ ಅಥವಾ ಹೆಚ್ಚಿನ ಹಣವನ್ನು ಪಡೆಯಬಹುದು. ದಿನದಲ್ಲಿ 10 ವಾಹನಗಳನ್ನು ಸ್ವಚ್ಛಗೊಳಿಸಿದರೆ ನೀವು 5000 ರೂಪಾಯಿಗಳನ್ನು ಪಡೆಯಬಹುದು. ಇದನ್ನು ತಿಂಗಳಿಗೆ ಲೆಕ್ಕ ಹಾಕಿದ್ರೆ ನಿಮಗೆ 1.5 ಲಕ್ಷ ರೂಪಾಯಿ ಸಿಗಲಿದೆ. ಯಾವುದೇ ಕೆಲಸ ಮಾಡುವುದಾದ್ರೂ ಸರ್ಕಾರದ ಮಾರ್ಗಸೂಚಿಯಡಿ ಮಾಡಬೇಕು.