ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC) ಆರಂಭಿಸಿರುವ SMS ಆಧರಿತ ಸೇವೆಯೊಂದರ ಮೂಲಕ ಇದೀಗ ಗ್ರಾಹಕರು ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳಬಹುದಾಗಿದೆ.
ನಿಗದಿತ ಫಾರ್ಮ್ಯಟ್ ಒಂದರಲ್ಲಿ 9224992249 ಸಂಖ್ಯೆಗೆ SMS ಕಳುಹಿಸುವ ಮೂಲಕ ಯಾವುದೇ ಗ್ರಾಹಕ ಇದೀಗ ಇಂಧನ ಬೆಲೆಯ ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪೆಟ್ರೋಲ್/ಡೀಸೆಲ್ ಬೆಲೆಗಳ ವ್ಯತ್ಯಯವಾಗುತ್ತಲೇ ಇರುತ್ತದೆ.
ದೇಶದ ಪ್ರಮುಖ ಇಂಧನ ಪೂರೈಕೆದಾರರಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಮ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿನಿತ್ಯವೂ ಸಹ ಜಾಗತಿಕ ಮಾರುಕಟ್ಟೆಗಳಲ್ಲಿ ಆಗುವ ವ್ಯತ್ಯಾಸದ ಆಧಾರದ ಮೇಲೆ ಸಗಟು ಪೆಟ್ರೋಲ್ ದರದಲ್ಲಿ ಏರಿಳಿಕೆಗಳನ್ನು ಮಾಡುತ್ತಲೇ ಇರುತ್ತವೆ.
ಬೆಂಗಳೂರಿನ ಗ್ರಾಹಕರು RSP 118219 ಎಂದು ಟೈಪ್ ಮಾಡಿ 9224992249ಕ್ಕೆ ಸಂದೇಶ ಕಳುಹಿಸಬೇಕಾಗುತ್ತದೆ.