ದೇಶದ ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸೇರಿದೆ. ಅನೇಕ ಸರ್ಕಾರಿ ಸೇವೆಯ ಲಾಭ ಪಡೆಯಲು ಆಧಾರ್ ಕಡ್ಡಾಯ. ಹುಟ್ಟಿದ ಮಗುವಿಗೂ ಆಧಾರ್ ಮಾಡಿಸಲಾಗುತ್ತದೆ. ಮಕ್ಕಳಿಗಾಗಿ ಬಾಲ್ ಆಧಾರ್ ತಯಾರಿಸುವಂತೆ ಆಧಾರ್ ಕಾರ್ಡ್ ತಯಾರಕ ಸರ್ಕಾರಿ ಸಂಸ್ಥೆ ಯುಐಡಿಎಐ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ.
ಈ ಕಾರ್ಡನ್ನು ಐದು ವರ್ಷದೊಳಗಿನ ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಮಕ್ಕಳಿಗೆ ನೀಡಲಾಗುವ ಆಧಾರ್ ನೀಲಿ ಬಣ್ಣದಲ್ಲಿರುತ್ತದೆ. ಮಗುವಿಗೆ 5 ವರ್ಷವಾಗ್ತಿದ್ದಂತೆ ಈ ಆಧಾರ್ ಅಮಾನ್ಯವಾಗುತ್ತದೆ. ನಂತ್ರ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಸಂಖ್ಯೆ ನೀಡಿ ಮಕ್ಕಳ ಬಯೋಮೆಟ್ರಿಕ್ ವಿವರ ನೀಡಿ, ಶಾಶ್ವತ ಆಧಾರ್ ಪಡೆಯಬೇಕಾಗುತ್ತದೆ.
ಮಕ್ಕಳಿಗಾಗಿ ನೀಲಿ ಆಧಾರ್ ಕಾರ್ಡ್ ಬಯಸುವವರು, ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಿ ಫಾರ್ಮ್ ಭರ್ತಿ ಮಾಡಬೇಕು. ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ನೀಡಬೇಕು. ಮಗುವಿನ ಫೋಟೋವನ್ನು ನೀಡಬೇಕಾಗುತ್ತದೆ. ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ಇಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಪಾಲಕರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. 60 ದಿನಗಳಲ್ಲಿ ಮಕ್ಕಳ ಆಧಾರ್ ಕಾರ್ಡ್ ಮನೆಗೆ ಬರುತ್ತದೆ. ಹೊಸ ನಿಯಮದ ಪ್ರಕಾರ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡಲಾಗ್ತಿದೆ.