ಡೇಟಾ ಸೋರಿಕೆಯಾಗ್ತಿರುವ ಸುದ್ದಿಯನ್ನು ನಾವು ಆಗಾಗ ಕೇಳ್ತೆವೆ. ನಮ್ಮ ಡೇಟಾ ಕೂಡ ಸೋರಿಕೆಯಾಗಿದೆಯೇ ಎಂಬ ಭಯ ನಮ್ಮಲ್ಲಿ ಕಾಡುತ್ತದೆ. ನಮ್ಮ ಡೇಟಾ ಸೋರಿಕೆಯಾಗಿದೆಯೇ ಎಂಬುದನ್ನು ತಿಳಿಯುವುದು ಅವಶ್ಯಕ.
Have i been pwned ಎಂಬ ವೆಬ್ಸೈಟ್ ಇದೆ. ಅಲ್ಲಿ ಇಮೇಲ್ ಅಥವಾ ಫೋನ್ ನಂಬರ್ ನಮೂದಿಸಿ, ಡೇಟಾ ಕಳ್ಳತನವಾಗಿದೆಯೇ ಎಂಬುದನ್ನು ತಿಳಿಯಬಹುದು. ಈ ಮೊದಲು ಬಳಕೆದಾರರು ಇಮೇಲ್ ಮಾತ್ರ ನಮೂದಿಸಬೇಕಿತ್ತು. ಆದ್ರೀಗ ಫೋನ್ ನಂಬರ್ ಕೂಡ ಹಾಕಬಹುದು.
PVC ಆಧಾರ್ ಪಡೆಯುವುದು ಹೇಗೆ..? ಇಲ್ಲಿದೆ ಅದರ ಮಾಹಿತಿ
ಫೇಸ್ಬುಕ್ ನ 533 ಮಿಲಿಯನ್ ಬಳಕೆದಾರರ ವೈಯಕ್ತಿಕ ಡೇಟಾ ಹ್ಯಾಕರ್ಸ್ ಫೋರಂನಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ಬಳಕೆದಾರರನ್ನು ಆತಂಕಕ್ಕೆ ತಳ್ಳಿದೆ. ಸುಮಾರು 106 ದೇಶಗಳ ಬಳಕೆದಾರರ ಡೇಟಾ ಸೋರಿಕೆಯಾಗಿತ್ತು.
ಕೆಲವು ದಿನಗಳ ಹಿಂದೆ ಭಾರತದಲ್ಲಿ ಡೇಟಾ ಸೋರಿಕೆಯ ದೊಡ್ಡ ಸುದ್ದಿ ಬಹಿರಂಗವಾಗಿತ್ತು. ಇದರಲ್ಲಿ ಸುಮಾರು 9.9 ಕೋಟಿ ಭಾರತೀಯರ ಡೇಟಾ ಸೋರಿಕೆಯಾಗಿದೆ. ಇವುಗಳಲ್ಲಿ ಮೊಬೈಲ್ ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಇ-ಮೇಲ್ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಸೇರಿವೆ.