ಇಂದಿನ ತಂತ್ರಜ್ಞಾನದ ಪ್ರಪಂಚದಲ್ಲಿ ಪ್ರತಿಯೊಬ್ಬರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳನ್ನು ಕ್ಯಾರಿ ಮಾಡುತ್ತಾರೆ. ಆದರೆ ಅನೇಕ ಬಾರಿ ನಾವು ಬಳಸುವ ವೈಫೈ ದುರುಪಯೋಗವಾಗುತ್ತಿದೆ ಎನ್ನುವ ಅನುಮಾನ ಅನೇಕರಿಗೆ ಬರುತ್ತದೆ. ಆದರೆ ಅದನ್ನು ಕಂಡುಹಿಡಿಯುವುದು ತಿಳಿದಿರುವುದಿಲ್ಲ.
ವೈಫೈ ದುರ್ಬಳಕೆಯಾಗಿದ್ದರೆ ಅಥವಾ ಡೇಟಾ ಸೋರಿಕೆಯಾಗುವ ಬಗ್ಗೆ ಏನಾದರೂ ಅನುಮಾನ ಬಂದರೆ, ಅದನ್ನು ಕಂಡುಹಿಡಿಯಲು ಈ ತಂತ್ರ ಬಳಸಿ. ಆರಂಭದಲ್ಲಿ ನಿರಂತರವಾಗಿ ನಿಮ್ಮ ವೈಫೈ ಸ್ಪೀಡ್ ಕಡಿಮೆಯಾಗುತ್ತಿದ್ದರೆ, ನಿಮ್ಮ ಡೇಟಾವನ್ನು ಬೇರೆಯವರು ಬಳಸುತ್ತಿರುವ ಸಾಧ್ಯತೆಯಿರುತ್ತದೆ. ಇದನ್ನು ಕಂಡು ಹಿಡಿಯಲು ಮೊದಲು ರೂಟರ್ ಅಡ್ಮಿನ್ ಐಡಿಗೆ ಒಪನ್ ಮಾಡಿದರೆ, ಅದರಲ್ಲಿ ಯಾವ ಯಾವ ಡಿವೈಸ್‌ಗಳು ನಿಮ್ಮ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿದೆ ಎನ್ನುವುದು ತಿಳಿಯುತ್ತದೆ. ಅದರಿಂದ ನೀವು ಗಮನಿಸಬಹುದು.
ಇನ್ನು ಈ ಸೋರಿಕೆಯನ್ನು ತಡೆಯಲು ಪ್ರಮುಖವಾಗಿ, ರೂಟರ್ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಪಾಸ್‌ವರ್ಡ್ ಹಾಗೂ ಯೂಸರ್ ನೇಮ್‌ನ್ನು ಬದಲಿಸಬೇಕು. ಇದರೊಂದಿಗೆ WPA 2 ಪಾಸ್‌ವರ್ಡ್ ನ್ನು ವೈಫೈಗೆ ಇಡಬೇಕು. ಈ ಪಾಸ್‌ವರ್ಡ್ ಕೊಂಚ ಕಷ್ಟಕರವಾಗಿದ್ದರೆ, ಅದನ್ನು ಬೇಧಿಸುವುದು ಅನೇಕರಿಗೆ ಕಷ್ಟವಾಗುತ್ತದೆ. ಇದರೊಂದಿಗೆ ಎಸ್‌ಎಸ್‌ಐಡಿಯನ್ನು ಪಬ್ಲಿಕ್‌ಗೆ ಇಡುವ ಬದಲು, ಹೈಡ್ ಮಾಡಬೇಕು. ಈ ರೀತಿ ಮಾಡುವುದರಿಂದ ಆಟೋಮ್ಯಾಟಿಕ್ ಆಗಿ ನಿಮ್ಮ ವೈಫೈ ಯಾರಿಗೂ ಕಾಣಿಸುವುದಿಲ್ಲ. ಇದರೊಂದಿಗೆ ಏರ್ ಶೇರ್ ಎನ್ನುವ ತಂತ್ರಾಂಶವಿದ್ದು, ಇದರ ಮೂಲಕವೂ ಡೇಟಾ ಕದಿಯುವುದನ್ನು ತಡೆಯಬಹುದಾಗಿದೆ.