ಇತ್ತೀಚಿನ ದಿನಗಳಲ್ಲಿ ವೆಚ್ಚ ಹೆಚ್ಚಾಗ್ತಿದೆ. ಗಳಿಕೆಗಿಂತ ವೆಚ್ಚ ಹೆಚ್ಚಾಗ್ತಿರುವುದ್ರಿಂದ ಉಳಿತಾಯ ಕಷ್ಟವಾಗ್ತಿದೆ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಹೆಚ್ಚಿನ ಹಣದ ಅವಶ್ಯಕತೆಯಿರುತ್ತದೆ. ವೈದ್ಯಕೀಯ ಖರ್ಚು ಹೆಚ್ಚಿರುತ್ತದೆ. ವೃದ್ಧಾಪ್ಯದಲ್ಲಿಯೂ ಸಹ ನಿಯಮಿತವಾಗಿ ಮಾಸಿಕ ಆದಾಯ ನೀಡುವ ಯೋಜನೆಯ ಅವಶ್ಯಕತೆಯಿದೆ. ವಿಶ್ವಾಸಾರ್ಹ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಭವಿಷ್ಯದಲ್ಲಿ ನೆಮ್ಮದಿ ಕಾಣಬಹುದು.
ಪ್ರಧಾನ ಮಂತ್ರಿ ವಯಾ ವಂದನ ಯೋಜನೆ : ಪ್ರಧಾನ ಮಂತ್ರಿ ವಯಾ ವಂದನ ಯೋಜನೆಯನ್ನು ದೇಶದ ಅತಿದೊಡ್ಡ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್‌ನಿಂದ ಖರೀದಿಸಬಹುದು. ಇದು 10 ವರ್ಷಗಳ ಕಾಲ ನಿಗದಿತ ದರದಲ್ಲಿ ಪಿಂಚಣಿ ನೀಡುತ್ತದೆ. ಇದು ನಿವೃತ್ತ ಜನರಿಗೆ ಉತ್ತಮ ಯೋಜನೆಯಾಗಿದೆ. 60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ವಾರ್ಷಿಕ ಶೇಕಡಾ 7.4 ರಷ್ಟು ಬಡ್ಡಿ ಸಿಗಲಿದೆ. ಪಾಲಿಸಿದಾರರ ಮರಣದ ನಂತರ, ಖರೀದಿ ಬೆಲೆಯನ್ನು ಹಣದ ನಾಮಿನಿಗೆ ಹಿಂದಿರುಗಿಸಲಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ: ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 7.4 ರಷ್ಟು ವಾರ್ಷಿಕ ಬಡ್ಡಿ ಬರಲಿದೆ. ಇದನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ 5 ವರ್ಷಗಳಲ್ಲಿ ಪಕ್ವವಾಗುತ್ತದೆ. ಇದನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು.
ಸರ್ಕಾರಿ ಸೆಕ್ಯುರಿಟೀಸ್ ಅಂದರೆ ಜಿ-ಸೆಕ್ಸ್ ಸಹ ಸುರಕ್ಷಿತ ಹೂಡಿಕೆಯಾಗಿದೆ. ಈ ಭದ್ರತೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತವೆ. ಈ ಯೋಜನೆ ಹೂಡಿಕೆಯ ಮೇಲೆ ನಿಯಮಿತ ಬಡ್ಡಿ ಸಿಗುತ್ತದೆ.