ದೇಶದ ಬಡವರಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತಂದಿದೆ. ಶೂನ್ಯ ಬಾಲೆನ್ಸ್ ನಲ್ಲಿ ಅಂಚೆ ಕಚೇರಿ, ಬ್ಯಾಂಕ್ ನಲ್ಲಿ ಬಡವರು ಈ ಖಾತೆ ತೆರೆಯಬಹುದಾಗಿದೆ. ಈ ಖಾತೆ ತೆರೆದ ಜನರಿಗೆ ಅನೇಕ ಲಾಭವಿದೆ. ನಿಮ್ಮ ಈ ಖಾತೆಯಲ್ಲಿ ಹಣವಿಲ್ಲದೆ ಹೋದ್ರೂ ನೀವು 5 ಸಾವಿರ ರೂಪಾಯಿ ವಿತ್ ಡ್ರಾ ಮಾಡಬಹುದು.
ಪ್ರಧಾನ ಮಂತ್ರಿ ಜನ ಧನ್ ಖಾತೆಯಲ್ಲಿ ಗ್ರಾಹಕರಿಗೆ 5000 ರೂಪಾಯಿಗಳ ಓವರ್ಡ್ರಾಫ್ಟ್ ಸೌಲಭ್ಯ ಸಿಗುತ್ತದೆ. ಓವರ್ ಡ್ರಾಫ್ಟ್ ಸೌಲಭ್ಯದ ಲಾಭ ಪಡೆಯಲು, ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಇದಲ್ಲದೆ, ಪಿಎಂಜೆಡಿವೈ ಖಾತೆಯನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು. ಜನ ಧನ್ ಯೋಜನೆ ಅಡಿಯಲ್ಲಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಹೆಸರಿನಲ್ಲೂ ಖಾತೆಯನ್ನು ತೆರೆಯಬಹುದು.
ಓವರ್ಡ್ರಾಫ್ಟ್ ಸೌಲಭ್ಯವೆಂದರೆ ಖಾತೆದಾರನು ತನ್ನ ಖಾತೆಯಲ್ಲಿ ಹಣವಿಲ್ಲದಿದ್ದರೂ ಸಹ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಬಹುದು. ಖಾತೆದಾರರ ಖಾತೆಯಲ್ಲಿ ಹಣವಿರುವುದಿಲ್ಲ. ಪ್ರಧಾನ್ ಮಂತ್ರಿ ಧನ್ ಖಾತೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡದಿದ್ದರೆ, ಓವರ್ಡ್ರಾಫ್ಟ್ ಸೌಲಭ್ಯದ ಪ್ರಯೋಜನ ಸಿಗುವುದಿಲ್ಲ.
ಖಾತೆದಾರನು ಮೊದಲ 6 ತಿಂಗಳುಗಳವರೆಗೆ ಖಾತೆಯಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಇಟ್ಟುಕೊಳ್ಳಬೇಕು. ಆಗಾಗ ಖಾತೆಯಿಂದ ವಹಿವಾಟು ನಡೆಸಬೇಕು. ಅಂತಹ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಇದನ್ನು ವ್ಯವಹಾರಗಳಿಗೆ ಸುಲಭವಾಗಿ ಬಳಸಬಹುದು.
ಜನ ಧನ್ ಖಾತೆಯನ್ನು ತೆರೆಯಲು ಬಯಸಿದ್ದರೆ ಹತ್ತಿರದ ಬ್ಯಾಂಕ್ಗೆ ಹೋಗಬೇಕು. ಬ್ಯಾಂಕಿನಲ್ಲಿ ಒಂದು ಫಾರ್ಮ್ ಭರ್ತಿ ಮಾಡಬೇಕು. ಅದರಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ ಸೇರಿದಂತೆ ಕೆಲ ದಾಖಲೆ ನಮೂದಿಸಬೇಕು.ಬ್ಯಾಂಕ್ ಕೇಳುವ ದಾಖಲೆಗಳನ್ನು ನೀಡಬೇಕಾಗುತ್ತದೆ.