ಕೊರೊನಾ ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಲಾಕ್ ಡೌನ್ ನಿಂದಾಗಿ ಅನೇಕರಿಗೆ ದುಡಿಮೆಯಿಲ್ಲ. ಇಂಥ ಸಂದರ್ಭದಲ್ಲಿ ಜನರು ತಮ್ಮ ಖರ್ಚು ಕಡಿಮೆ ಮಾಡಿದ್ದಾರೆ. ಆದ್ರೆ ಕೆಲವೊಂದು ಖರ್ಚು ಅನಿವಾರ್ಯ. ಆದ್ರೆ ಅದಕ್ಕೂ ಹಣವಿಲ್ಲದ ಪರಿಸ್ಥಿತಿಯನ್ನು ಅನೇಕರು ಎದುರಿಸುತ್ತಿದ್ದಾರೆ. ಕೆಲ ಮಾರ್ಗದ ಮೂಲಕ ಹಣದ ವ್ಯವಸ್ಥೆ ಮಾಡಬಹುದು.
ಈ ಸಂದರ್ಭದಲ್ಲಿ ಹೊಸ ವ್ಯವಹಾರ ಶುರು ಮಾಡಲು ಬಯಸಿದ್ದರೆ ನೀವು ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಮೂರು ವಿಧದಲ್ಲಿ ಸಾಲ ಲಭ್ಯವಿದೆ.
ಶಿಶು : 50 ಸಾವಿರ ರೂಪಾಯಿವರೆಗೆ ಸಾಲ ಸಿಗಲಿದೆ.
ಕಿಶೋರ : 50 ಸಾವಿರದಿಂದ ಐದು ಲಕ್ಷ ರೂಪಾಯಿಗಳವರೆಗೆ ಸಾಲ ಸಿಗಲಿದೆ.
ತರುಣ: ಐದು ಲಕ್ಷದಿಂದ 10 ಲಕ್ಷ ರೂಪಾಯಿಗಳ ಸಾಲವನ್ನು ಒಳಗೊಂಡಿದೆ.
ಉದ್ಯೋಗಿಗಳು ಪಿಎಫ್ ಖಾತೆ ಮೂಲಕ ಹಣ ಪಡೆಯಬಹುದು. ಪಿಎಫ್ ಖಾತೆಯು ಹೆಚ್ಚಿನ ಬಡ್ಡಿ ಪಾವತಿಸುತ್ತದೆ. ಹಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಪಿಎಫ್ ಖಾತೆಯಿಂದ ಹಣವನ್ನು ಪಡೆಯಬಹುದು. ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಮಿತಿಯಿದೆ.
ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಹಣದ ಕೊರತೆ ಎದುರಿಸುತ್ತಿದ್ದಾರೆ. ಚಿನ್ನದ ಸಾಲದ ಬೇಡಿಕೆ ಹೆಚ್ಚಾಗಿದೆ. ಚಿನ್ನದ ಆಭರಣಗಳನ್ನು ಭದ್ರತೆಯಾಗಿ ಇಟ್ಟುಕೊಳ್ಳುವುದರ ಮೂಲಕ ಅವುಗಳ ಮೌಲ್ಯದ ಶೇಕಡಾ 90 ರಷ್ಟು ಸಾಲವನ್ನು ತೆಗೆದುಕೊಳ್ಳಬಹುದು. ಸಾಲ ತೆಗೆದುಕೊಳ್ಳಲು ಚಿನ್ನದ ಸಾಲವು ಸುರಕ್ಷಿತ ಮಾರ್ಗವಾಗಿದೆ.
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ವೈಯಕ್ತಿಕ ಸಾಲವನ್ನೂ ಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಶೇಕಡಾ 10ರಿಂದ ಶೇಕಡಾ 10.50 ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ವೈಯಕ್ತಿಕ ಸಾಲದ ಮೊತ್ತ 50,000 ದಿಂದ 25 ಲಕ್ಷ ರೂಪಾಯಿಗಳವರೆಗೆ ಇರಬಹುದು.