ರೇಷನ್ ಕಾರ್ಡನ್ನು ಆಧಾರ್ ಗೆ ಸಂಪರ್ಕಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಮೋದಿ ಸರ್ಕಾರ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಆಧಾರ್‌ಗೆ ಲಿಂಕ್ ಆದ್ರೆ ಗ್ರಾಹಕರು ಪಡಿತರ ಚೀಟಿ ಇಲ್ಲದೆ ಪಡಿತರ ಅಂಗಡಿಗಳಲ್ಲಿ ಸಾಮಾನು ಖರೀದಿ ಮಾಡಬಹುದು. ಪಡಿತರ ಚೀಟಿ ಸಂಖ್ಯೆ ಆಧಾರ ಮೇಲೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.
ಲಾಕ್‌ಡೌನ್ ಜಾರಿಗೆ ಬಂದ ನಂತ್ರ ಪಡಿತರ ಚೀಟಿ ಇಲ್ಲದ ಜನರಿಗೂ ಪಡಿತರ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಇದು ಜಾರಿಗೆ ಬಂದಿದೆ. ಮೂರು ತಿಂಗಳುಗಳ ಕಾಲ ಉಚಿತ ಪಡಿತರ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈ ನಿಯಮವನ್ನು ನವೆಂಬರ್ ವರೆಗೆ ವಿಸ್ತರಿಸಿದೆ. ನವೆಂಬರ್ ವರೆಗೆ ಪಡಿತರ ಚೀಟಿಯಿಲ್ಲದೆ 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಒಂದು ಕೆಜಿ ದ್ವಿದಳ ಧಾನ್ಯಗಳನ್ನು ಖರೀದಿಸಬಹುದಾಗಿದೆ.
ನವೆಂಬರ್ ನಂತ್ರ ಆಧಾರ್ ಜೊತೆ ಪಡಿತರ ಚೀಟಿ ಲಿಂಕ್ ಆದ ಗ್ರಾಹಕರಿಗೆ ಪಡಿತರ ಚೀಟಿಯಿಲ್ಲದೆ ಆಹಾರ ಧಾನ್ಯ ನೀಡಲಾಗುವುದು.