ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೌಲಭ್ಯಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಶಾಲೆ ಪ್ರವೇಶಕ್ಕೆ, ಮನೆ ಖರೀದಿ ಹೀಗೆ ಎಲ್ಲ ಕೆಲಸಗಳಿಗೂ ಆಧಾರ್ ಬಳಸಲಾಗುತ್ತದೆ. ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಯುಐಡಿಎಐ, ಆಧಾರ್ ಗೆ ಸಂಬಂಧಿಸಿದ ನಿಯಮಗಳನ್ನು ಆಗಾಗ ಬದಲಿಸುತ್ತಿರುತ್ತದೆ.
ಈಗ ಯುಐಡಿಎಐ ಮತ್ತೊಂದು ಬದಲಾವಣೆ ಬಗ್ಗೆ ಟ್ವೀಟ್ ಮಾಡಿದೆ. ಇನ್ಮುಂದೆ ಒಂದು ದಿನದ ಮಗುವಿಗೂ ಆಧಾರ್ ಕಾರ್ಡ್ ಪಡೆಯಬಹುದು. ಪ್ರಸ್ತುತ ಯುಐಡಿಎಐ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆಧಾರ್ ಕಾರ್ಡ್ ನೀಡುತ್ತದೆ. ಇದನ್ನು ಬಾಲ್ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ.
ಒಂದು ದಿನದ ಮಗುವಿಗೆ ಕೂಡ ಆಧಾರ್ ಕಾರ್ಡ್ ತಯಾರಿಸಬಹುದು ಎಂದು ಟ್ವೀಟ್ ಮಾಡುವ ಮೂಲಕ ಜನರಿಗೆ ಯುಐಡಿಎಐ ಮಾಹಿತಿ ನೀಡಿದೆ. ಮಗುವಿನ ಆಧಾರ್ ಕಾರ್ಡ್ ತಯಾರಿಸಲು ಜನನ ಪ್ರಮಾಣಪತ್ರದ ಅಗತ್ಯವಿದೆ. ಅದನ್ನು ಮಗುವಿನ ಜನನದ ನಂತರ ಆಸ್ಪತ್ರೆಯಿಂದ ಪಡೆಯಬಹುದು. ಇದಲ್ಲದೆ ಮಗುವಿನ ತಾಯಿ ಅಥವಾ ತಂದೆಯ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.
ನವಜಾತ ಶಿಶುವಿಗೆ ಆಧಾರ್ ಕಾರ್ಡ್ ಪಡೆಯುವ ಮೊದಲು ಆಸ್ಪತ್ರೆಯಿಂದ ಜನನ ದಾಖಲೆ ಪಡೆಯಬೇಕು. ಕೆಲ ಆಸ್ಪತ್ರೆಗಳು ಆಧಾರ್ ಕಾರ್ಡ್ ಮಾಡಲು ನೆರವಾಗುತ್ತವೆ. ನವಜಾತ ಶಿಶುವಿನ ಆಧಾರ್ ಕಾರ್ಡ್ ತಯಾರಿಸುವಾಗ ಬಯೋಮೆಟ್ರಿಕ್ ಡೇಟಾವನ್ನು ತೆಗೆದುಕೊಳ್ಳಲಾಗುವುದಿಲ್ಲ.
ಮಗುವಿನ ಆಧಾರ್ ಕಾರ್ಡ್ ಪಡೆಯಲು ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಆಧಾರ್ ನೋಂದಣಿ ಲಿಂಕ್ ಕ್ಲಿಕ್ ಮಾಡಬೇಕು. ಮಗುವಿನ ಹೆಸರನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಬೇಕು. ನಂತ್ರ ಆಧಾರ್ ಕೇಂದ್ರಕ್ಕೆ ಭೇಟಿ ನೀಡಲು ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ನಂತ್ರ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಮಗುವಿಗೆ ಆಧಾರ್ ಕಾರ್ಡ್ ನೀಡಲಾಗುತ್ತದೆ.