ಇದು ದುಬಾರಿ ದುನಿಯಾ. ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ದುಡಿದ ಹಣ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ ಎನ್ನುವವರ ಸಂಖ್ಯೆ ಸಾಕಷ್ಟಿದೆ. ಕೆಲವರು ದಿನದಲ್ಲಿ ಕೆಲ ಗಂಟೆ ಮಾತ್ರ ಕೆಲಸ ಮಾಡ್ತಾರೆ. ಉಳಿದ ಸಮಯ ವ್ಯರ್ಥವಾಗುತ್ತದೆ. ಸಮಯ ಹೊಂದಿಸಿಕೊಂಡು ಹೆಚ್ಚು ಗಳಿಸಲು ಆಸಕ್ತಿ ಹೊಂದಿರುವವರು ಅಮೆಜಾನ್ ಫ್ಲೆಕ್ಸ್ ಜೊತೆ ಕೈ ಜೋಡಿಸಬಹುದು.
ಹೊಸ ಆದಾಯ ಯೋಜನೆಗಳಲ್ಲಿ ಅಮೆಜಾನ್ ಫ್ಲೆಕ್ಸ್ ಕೂಡ ಒಂದು. ಅಮೆಜಾನ್ ಫ್ಲೆಕ್ಸ್ ಅಮೆಜಾನ್ ಕಂಪನಿಯ ಉತ್ಪನ್ನ ವಿತರಣೆ ಸೇವೆಯಾಗಿದೆ. ಅಮೆಜಾನ್‌ನಿಂದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಅರೆಕಾಲಿಕ ಉದ್ಯೋಗಾವಕಾಶವನ್ನು ಇದು ನೀಡುತ್ತದೆ. ಕೆಲಸದ ಸಮಯವನ್ನು ನೀವೇ ನಿರ್ಧರಿಸಬಹುದು. ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಅಮೆಜಾನ್ ನ ಎಲ್ಲ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಬೇಕಾಗುತ್ತದೆ.
ಗಂಟೆ ಆಧಾರದ ಮೇಲೆ ನಿಮಗೆ ಸಂಬಳ ನೀಡಲಾಗುತ್ತದೆ. ಗಂಟೆಗೆ 140 ರೂಪಾಯಿವರೆಗೆ ನಿಮಗೆ ಲಭ್ಯವಾಗುತ್ತದೆ. ಅಂದ್ರೆ ಪ್ರತಿ ದಿನ 3-4 ಗಂಟೆ ಕೆಲಸ ಮಾಡಿ ತಿಂಗಳಿಗೆ 15 ಸಾವಿರಕ್ಕಿಂತ ಹೆಚ್ಚು ಹಣ ಗಳಿಸಬಹುದು. ನಿಮಗೆ ಪರಿಚಯವಿರುವ ಪ್ರದೇಶವನ್ನೇ ನೀವು ಡೆಲಿವರಿಗೆ ಆಯ್ಕೆ ಮಾಡಿಕೊಳ್ಳಬಹುದು.
ಫೋನ್ ನಲ್ಲಿ ಮೊದಲು ಅಮೆಜಾನ್ ಫ್ಲೆಕ್ಸ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಬಳಿ ದ್ವಿಚಕ್ರವಾಹನ ಅಥವಾ ಯಾವುದೇ ವಾಹನವಿರಬೇಕು. ಚಾಲನಾ ಪರವಾನಗಿ ಹೊಂದಿರಬೇಕು. 18 ವರ್ಷ ಮೇಲ್ಪಟ್ಟವರಿಗೆ ಕೆಲಸ ಸಿಗಲಿದೆ. ಪಾನ್ ಕಾರ್ಡ್ ಅವಶ್ಯಕ. ಹಾಗೆ ಬ್ಯಾಂಕ್ ಖಾತೆಯನ್ನು ನೀವು ಹೊಂದಿರಬೇಕು. ಫೋನ್ ನಲ್ಲಿ ಫ್ಲ್ಯಾಷ್ ಹೊಂದಿರುವ ಕ್ಯಾಮೆರಾ, ಜಿಪಿಎಸ್ ಸ್ಥಳ, ಧ್ವನಿ ಮತ್ತು ಡೇಟಾ ಸಂಪರ್ಕವಿರಬೇಕು.
ಅಮೆಜಾನ್ ಫ್ಲೆಕ್ಸ್ ನಲ್ಲಿ ಕೆಲಸ ಮಾಡುವ ಎಲ್ಲಾ ಚಾಲಕರಿಗೆ ಅಪಘಾತ ವಿಮೆ ನೀಡುತ್ತದೆ. ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ಇದ್ರಲ್ಲಿ ಸೇರುತ್ತದೆ. ಅಮೆಜಾನ್ ವಸ್ತುಗಳ ವಿತರಣೆ ವೇಳೆ ನಡೆದ ಅಪಘಾತಕ್ಕೆ ಮಾತ್ರ ಇದು ಅನ್ವಯವಾಗುತ್ತದೆ.