ಸರ್ಕಾರ ಹೆಣ್ಣು ಮಕ್ಕಳಿಗಾಗಿ ಶುರು ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚು ಜನಪ್ರಿಯತೆ ಪಡೆದಿದೆ. ಮಗುವಿನ ಮದುವೆ, ವಿದ್ಯಾಭ್ಯಾಸಕ್ಕೆ ಈ ಯೋಜನೆ ನೆರವಾಗಲಿದೆ. ಹೆಣ್ಣು ಮಗುವಿಗೆ 10 ವರ್ಷವಾಗುವ ಮೊದಲು ಸುಕನ್ಯಾ ಸಮೃದ್ಧಿ ಯೋಜನೆ ಮಾಡಿಸಲು ಅವಕಾಶವಿದೆ. ಸರ್ಕಾರದಿಂದ ಬಡ್ಡಿ ಕೂಡ ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಮಾಡಿಸಿದವರು ಅಂಚೆ ಕಚೇರಿಗೆ ಹೋಗಿ ಹಣ ಪಾವತಿ ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಯೋಜನೆಗೆ ಹಣ ಹಾಕಬಹುದು.
ಐಪಿಪಿಸಿ ಅಪ್ಲಿಕೇಷನ್ ಮೂಲಕ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ಠೇವಣಿ ಮಾಡಬಹುದು. ಮೊದಲು ನಿಮ್ಮ ಉಳಿತಾಯ ಖಾತೆಯನ್ನು ಐಪಿಪಿಬಿಗೆ ಲಿಂಕ್ ಮಾಡಬೇಕು. ನಂತ್ರ ಡಿಒಪಿಗೆ ಹೋಗಬೇಕು. ಅಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆಯ್ಕೆ ಮಾಡಬೇಕು. ಅಲ್ಲಿ ಎಸ್ ಎಸ್ ವೈ ಖಾತೆ ಸಂಖ್ಯೆ ಮತ್ತು ಡಿಒಪಿ ಐಡಿ, ಖಾತೆ ಸಂಖ್ಯೆ ನಮೂದಿಸಬೇಕು. ಕಂತಿನ ಅವಧಿ ಹಾಗೂ ಮೊತ್ತವನ್ನು ಆಯ್ಕೆ ಮಾಡಿ ಅಲ್ಲಿ ಪಾವತಿ ಮಾಡಬೇಕು. ನಿಮ್ಮ ಹಣ ಪಾವತಿಯಾದ್ಮೇಲೆ ಐಪಿಪಿಸಿಯಿಂದ ಮಾಹಿತಿ ಬರುತ್ತದೆ.