alex Certify ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ತಿಳಿದಿರಲಿ ಈ ಮಾಹಿತಿ

ಹಣಕಾಸಿನ ತುರ್ತು ಪರಿಸ್ಥಿತಿ ಎದುರಾದಾಗ ಕ್ರೆಡಿಟ್​ ಕಾರ್ಡ್​ಗಳು ಆಪತ್ಬಾಂಧವನಂತೆ ಕಾರ್ಯ ನಿರ್ವಹಿಸುತ್ತವೆ. ಆದರೆ ಇಂತಹ ಕ್ರೆಡಿಟ್​ ಕಾರ್ಡ್​ಗಳನ್ನ ಕ್ಲೋಸ್​ ಮಾಡುವಾಗ ಬ್ಯಾಂಕ್​ ಗ್ರಾಹಕರು ತಮ್ಮ ಸಿಬಿಲ್​ ಸ್ಕೋರ್​ಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗುತ್ತೆ.

ಈ ಬಗ್ಗೆ ಸ್ಮಾರ್ಟ್ ಕಾಯಿನ್​ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್​ ಗರ್ಗ್ ಕ್ರೆಡಿಟ್ ಕಾರ್ಡ್ ಕ್ಲೋಸ್​ ಮಾಡುವಾಗ ಫೋರ್ಟ್ ಪೋಲಿಯೋದಲ್ಲಿ ಕ್ರೆಡಿಟ್​ ಮಿಶ್ರಣ ಹೊಂದುವುದನ್ನ ತಡೆಯಬಹುದಾಗಿದೆ. ಇದು ಪ್ರಸ್ತುತ ಸಿಬಿಲ್​ ಸ್ಕೋರ್​ ಕಡಿಮೆಯಾಗದಂತೆ ನೋಡಿಕೊಳ್ಳುತ್ತೆ. ಆದರೆ ಕ್ರೆಡಿಟ್​ ಸ್ಕೋರ್​ ಸುಧಾರಣೆ ಮಾಡುವಲ್ಲಿ ಸಹಾಯಕವಾಗಲ್ಲ ಎಂದು ಹೇಳಿದ್ದಾರೆ.

ಗ್ರಾಹಕರು ಬ್ಯಾಂಕ್​ ನೀಡಿದ ಕ್ರೆಡಿಟ್​ ಕಾರ್ಡ್ ಖಾತೆಯನ್ನ ಮುಚ್ಚಿದಾಗ ಕ್ರೆಡಿಟ್​ ಮಿತಿಯನ್ನೂ ಕಳೆದುಕೊಳ್ತಾರೆ. ಇದು ಸಾಲಗಾರರಿಗೆ ಅಪಾಯದ ಸಂಕೇತವಾಗಿದೆ. ಏಕೆಂದರೆ ಗ್ರಾಹಕರು ಹೆಚ್ಚಿನ ಪ್ರಮಾಣದ ಸಾಲವನ್ನ ಬಳಕೆ ಮಾಡ್ತಿದ್ದಾರೆ ಎಂಬುದನ್ನ ತೋರಿಸುತ್ತೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...