alex Certify ಗುಡ್ ನ್ಯೂಸ್: ಇಪಿಎಫ್​ ಬ್ಯಾಲೆನ್ಸ್​ನ್ನು ಉಮಂಗ್​ ಅಪ್ಲಿಕೇಶನ್​ ಮೂಲಕ ನೋಡೋದು ಹೇಗೆ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ಇಪಿಎಫ್​ ಬ್ಯಾಲೆನ್ಸ್​ನ್ನು ಉಮಂಗ್​ ಅಪ್ಲಿಕೇಶನ್​ ಮೂಲಕ ನೋಡೋದು ಹೇಗೆ? ಇಲ್ಲಿದೆ ಮಾಹಿತಿ

ಪಿಎಫ್​ ಎಂದೇ ಹೆಚ್ಚು ಖ್ಯಾತಿ ಪಡೆದಿರುವ ಎಪ್ಲಾಂಯಿ ಪ್ರಾವಿಡೆಂಟ್​ ಫಂಡ್ ಸರ್ಕಾರದಿಂದ ನೌಕರರಿಗಾಗಿ ನೀಡಲಾಗಿರುವ ವಿಶೇಷ ಸೌಲಭ್ಯಗಳಲ್ಲಿ ಒಂದಾಗಿದೆ. ನಮ್ಮದೇ ಸಂಬಳದ ಸ್ವಲ್ಪವೇ ಹಣವನ್ನ ಕೂಡಿಡುವ ಮೂಲಕ ನಿವೃತ್ತಿ ಹಂತದಲ್ಲಿ ಇಲ್ಲವೇ ಅವಶ್ಯಕತೆ ಇದ್ದಾಗಿ ದೊಡ್ಡ ಮೊತ್ತದ ಹಣವನ್ನ ನೌಕರರಿಗಾಗಿ ನೀಡುವ ಸಲುವಾಗಿ ಈ ಭವಿಷ್ಯ ನಿಧಿಯನ್ನ ಸರ್ಕಾರ ನೀಡಿದೆ.

ಇನ್ನು ನಿಮ್ಮ ಭವಿಷ್ಯ ನಿಧಿಯ ಬಗ್ಗೆ ಮಾಹಿತಿಯನ್ನ ಪಡೆಯುವ ಸಲುವಾಗಿ ಸರ್ಕಾರ ಉಮಂಗ್​ ಎಂಬ ಮೊಬೈಲ್​ ಅಪ್ಲಿಕೇಶನ್​ನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್​ನಲ್ಲಿ ಲಾಗಿನ್​ ಆಗುವ ಮೂಲಕ ನೀವು ನಿಮ್ಮ ಇಪಿಎಫ್​ ಖಾತೆಯ ಸಂಪೂರ್ಣ ವಿವರವನ್ನ ಪಡೆಯಬಹುದು.

ಹಾಗಾದ್ರೆ ಈ ಉಮಂಗ್​ ಅಪ್ಲಿಕೇಶನ್​ ಬಳಕೆ ಹೇಗೆ ಅನ್ನೋದನ್ನ ನೋಡೋದಾದ್ರೆ
ಮೊದಲು ಗೂಗಲ್​ ಪ್ಲೇ ಸ್ಟೋರ್​ನಿಂದ ಉಮಂಗ್​ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿ. ಬಳಿಕ ಈ ಅಪ್ಲಿಕೇಶನ್​ನಲ್ಲಿ ಇಪಿಎಫ್​ಓ ಎಂಬ ಆಯ್ಕೆ ಮೇಲೆ ಕ್ಲಿಕ್​ ಮಾಡಿದೆ. ಇದರಲ್ಲಿ ಎಂಪ್ಲಾಯಿ ಸೆಂಟ್ರಿಕ್ ಸರ್ವಿಸ್​ ಎಂಬ ಆಯ್ಕೆಯನ್ನ ಒತ್ತಿ. ಬಳಿಕ ವೀವ್​​ ಪಾಸ್​ಬುಕ್​ ಎಂಬ ಆಯ್ಕೆಯಲ್ಲಿ ನೀವು ಇಪಿಎಫ್​ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದಾಗಿದೆ.
ನಿಮ್ಮ ಬ್ಯಾಲೆನ್ಸ್ ಚೆಕ್​ ಮಾಡಲು ನೀವು ಮೊದಲು ನಿಮ್ಮ ಯುಎಎನ್​ ನಂಬರ್​ ನ್ನು ನಮೂದಿಸಬೇಕು. ಬಳಿಕ ನಿಮ್ಮ ನೋಂದಾಯಿತ ಮೊಬೈಲ್​ ನಂಬರ್​ಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನು ನಮೂದು ಮಾಡಿದ ಬಳಿಕ ಲಾಗಿನ್​ ಆಯ್ಕೆಯನ್ನು ಒತ್ತಿರಿ. ಕಂಪನಿ ಮೆಂಬರ್​ ಐಡಿ ಮೇಲೆ ಕ್ಲಿಕ್​ ಮಾಡಿದ ಬಳಿಕ ನಿಮ್ಮ ಬ್ಯಾಲೆನ್ಸ್ ಪರದೆ ಮೇಲೆ ಕಾಣಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...