ಭಾರತದಲ್ಲಿ ಗುರುತಿನ ಚೀಟಿ ಪಟ್ಟಿಯಲ್ಲಿ ಆಧಾರ್ ಕಾರ್ಡ್ ಕೂಡ ಸೇರಿದೆ. ಸರ್ಕಾರಿ ಯೋಜನೆ ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಫೋಟೋ ಜೊತೆ ಬಯೋಮೆಟ್ರಿಕ್ ಮಾಹಿತಿ ಸಿಗುತ್ತದೆ.
ಆಧಾರ್ ಕಾರ್ಡ್ ಮಾಡಿಸುವ ವೇಳೆ ನಮ್ಮ ಫೋಟೋಗಳು ಸುಂದರವಾಗಿ ಬಂದಿರುವುದಿಲ್ಲ. ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಇಷ್ಟವಾಗಿಲ್ಲವೆಂದ್ರೆ ನೀವು ಅದನ್ನು ಬದಲಾಯಿಸಬಹುದು.
‘ಆಧಾರ್ ಕಾರ್ಡ್’ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ: ಮೊಬೈಲ್ ಗೆ ನಂಬರ್ ಲಿಂಕ್ ಆಗಿದ್ರೆ ಲಸಿಕೆ ‘ಖಚಿತ’
ಯುಐಡಿಎಐ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಬದಲಿಸಲು ಆನ್ಲೈನ್ ಸೌಲಭ್ಯವನ್ನು ನೀಡಿದೆ. ಆದ್ರೆ ಈಗ ವಿಳಾಸವನ್ನು ಮಾತ್ರ ಆನ್ಲೈನ್ ನಲ್ಲಿ ಬದಲಿಸಬಹುದು. ಮೊಬೈಲ್ ಸಂಖ್ಯೆ, ಫೋಟೋ ಸೇರಿದಂತೆ ಉಳಿದ ಬದಲಾವಣೆಯನ್ನು ಆಫ್ಲೈನ್ ನಲ್ಲಿ ಮಾಡಬೇಕು. ಹತ್ತಿರದ ಆಧಾರ್ ಕೇಂದ್ರದಲ್ಲಿ ಅಥವಾ ಅಂಚೆ ಮೂಲಕ ಫೋಟೋ ಬದಲಾವಣೆಗೆ ಮನವಿ ಸಲ್ಲಿಸಬೇಕು.
ಮೊದಲು ಯುಐಡಿಎಐಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಗೆಟ್ ಆಧಾರ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಆಧಾರ್ ದಾಖಲಾತಿ/ನವೀಕರಣದ ಫಾರ್ಮ್ ಡೌನ್ಲೋಡ್ ಮಾಡಬೇಕು. ನಂತ್ರ ಫಾರ್ಮ್ ತುಂಬಿ ಆಧಾರ್ ದಾಖಲಾತಿ ಕೇಂದ್ರಕ್ಕೆ ನೀಡಬೇಕು. ಬೆರಳಚ್ಚು, ರೆಟಿನಾ ಸ್ಕ್ಯಾನ್ ಹಾಗೂ ಫೋಟೋವನ್ನು ದಾಖಲಾತಿ ಕೇಂದ್ರದಲ್ಲಿ ಮತ್ತೆ ಸೆರೆ ಹಿಡಿಯಲಾಗುತ್ತದೆ. ಆಧಾರ್ ಮಾಹಿತಿ ನವೀಕರಿಸಲು 50 ರೂಪಾಯಿ ನೀಡಬೇಕು. 90 ದಿನಗಳೊಳಗೆ ಹೊಸ ಆಧಾರ್ ನಿಮಗೆ ಸಿಗಲಿದೆ.