ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಇದೀಗ ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರೀಗ ಮೈಕ್ರೋಸಾಫ್ಟ್‌ನ ಚೇರ್ಮನ್ ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿದ್ದಾರೆ.
ಶೇರು ಮಾರುಕಟ್ಟೆಯಲ್ಲಿ ಟೆಸ್ಲಾ ಶೇರುಗಳ ಬೆಲೆಯಲ್ಲಿ ದೊಡ್ಡ ಏರಿಕೆ ಕಂಡ ಕಾರಣದಿಂದ ನವೆಂಬರ್ 23ರ ಅಂಕಿಅಂಶಗಳ ಪ್ರಕಾರ ಮಸ್ಕ್‌ರ ಆಸ್ತಿ ಮೌಲ್ಯದಲ್ಲಿ $7.2 ಶತಕೋಟಿಯಷ್ಟು ಏರಿಕೆ ಕಂಡು ಬಂದಿದೆ. ಈ ಮೂಲಕ 49 ವರ್ಷದ ಈ ಉದ್ಯಮಿಯ ಒಟ್ಟಾರೆ ಆಸ್ತಿಯ ಮೌಲ್ಯವು $127.9 ಶತಕೋಟಿ ಮುಟ್ಟಿದೆ.
ಈ ವರ್ಷದಲ್ಲೇ ಮಸ್ಕ್‌ರ ಆಸ್ತಿಯಲ್ಲಿ $100.3 ಶತಕೋಟಿಯಷ್ಟು ಹೆಚ್ಚಳ ಕಂಡುಬಂದಿದೆ. 2020ರ ಜನವರಿಯ ವೇಳೆಗೆ ಬ್ಲೂಮ್‌ಬರ್ಗ್ ಶತಕೋಟ್ಯಧೀಶರ ಸೂಚ್ಯಂಕದಲ್ಲಿ ಮಸ್ಕ್ 35ನೇ ಸ್ಥಾನದಲ್ಲಿದ್ದರು. ಮಸ್ಕ್‌ರ ಈ ಏರುಹಾದಿಯ ನಡಿಗೆಗೆ ನೆಟ್ಟಿಗರಿಂದ ಭಾರೀ ಕಲರ್‌ಫುಲ್ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.
https://twitter.com/rishabh_memes/status/1331110323013578753?ref_src=twsrc%5Etfw%7Ctwcamp%5Etweetembed%7Ctwterm%5E1331110323013578753%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Felon-musk-worlds-second-richest-person-memes-7063576%2F