ಹಾಳಾದ ನೋಟುಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2009ರಲ್ಲಿ ಕೆಲವೊಂದು ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ನಿಯಮದ ಪ್ರಕಾರ ಜನರು ಹಾಳಾದ, ಹರಿದ ನೋಟುಗಳನ್ನು ಆರ್ಬಿಐ ಕಚೇರಿಯಲ್ಲಿ ಅಥವಾ ದೇಶದಾದ್ಯಂತ ಗೊತ್ತುಪಡಿಸಿರುವ ಬ್ಯಾಂಕ್ ಗಳಲ್ಲಿ ಬದಲಿಸಬಹುದು. ನಿಮ್ಮಲ್ಲೂ ಹರಿದ ನೋಟುಗಳಿದ್ದರೆ ಚಿಂತೆಪಡುವ ಅಗತ್ಯವಿಲ್ಲ. ಬ್ಯಾಂಕ್ ಗೆ ಹೋಗಿ ನೋಟು ಬದಲಿಸಿಕೊಂಡು ಬರಬಹುದು.
ನಿಮ್ಮ ಬಳಿ ಇರುವ ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ನೀವು ನೋಟು ಬದಲಿಸಬಹುದು. ನೋಟು ಬದಲಿಸುವುದನ್ನು ಬ್ಯಾಂಕ್ ಸಿಬ್ಬಂದಿ ನಿರಾಕರಿಸುವಂತಿಲ್ಲ. ಎಲ್ಲ ಶಾಖೆಯಲ್ಲಿ ನೋಟು ಬದಲಿಸಬೇಕು. ಹಾಗೆ ಈ ಬಗ್ಗೆ ಬೋರ್ಡ್ ಹಾಕಬೇಕೆಂದು ಆರ್ ಬಿಐ ಸೂಚನೆ ನೀಡಿದೆ.
ನೀವು ನೀಡುವ ನೋಟಿನ ಪರಿಸ್ಥಿತಿ ಆಧರಿಸಿ ನಿಮಗೆ ಹಣ ವಾಪಸ್ ಸಿಗುತ್ತದೆ. ಎರಡು ಸಾವಿರ ರೂಪಾಯಿ ನೋಟು 88 ಚದರ ಸೆಂಟಿಮೀಟರ್ ಇದ್ದರೆ ನಿಮಗೆ ಪೂರ್ಣ ಹಣ ಸಿಗಲಿದೆ. 44 ಚದರ ಸೆಂಟಿಮೀಟರ್ ಗಿಂತ ಹೆಚ್ಚು ಗಾತ್ರದಲ್ಲಿದ್ದರೆ ಅರ್ಧ ಹಣ ಸಿಗುತ್ತದೆ. ಬ್ಯಾಂಕ್ ಈ ಕೆಲಸಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದ್ರೆ ಉದ್ದೇಶ ಪೂರ್ವಕವಾಗಿ ನೋಟುಗಳನ್ನು ಹರಿದು ಹಾಕಲಾಗಿದೆ ಎಂಬುದು ಗೊತ್ತಾದ್ರೆ ನೋಟು ಬದಲಿಸಲು ಬ್ಯಾಂಕ್ ನಿರಾಕರಿಸಬಹುದು.