ನವದೆಹಲಿ: ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹೆಚ್ಚುವರಿ ಸಿಮ್ ನಿಷ್ಕ್ರಿಯಗೊಳಿಸಲು ದೂರಸಂಪರ್ಕ ಇಲಾಖೆ ತಿರ್ಮಾನಿಸಿದೆ.
ಒಬ್ಬ ಚಂದಾದಾರರ 9 ಕ್ಕಿಂತ ಹೆಚ್ಚು ಸಿಮ್ ಹೊಂದಿದ್ದರೆ ಹೆಚ್ಚುವರಿ ಸಿಮ್ ಸಂಪರ್ಕ ಕಡಿತ ಮಾಡಲಾಗುವುದು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ 6 ಸಿಮ್ ಗಳಿಗಿಂತ ಹೆಚ್ಚಿನ ಸಿಮ್ ಹೊಂದುವಂತಿಲ್ಲ. ದೇಶದ ಇತರ ರಾಜ್ಯಗಳಲ್ಲಿ 9 ಕ್ಕಿಂತ ಹೆಚ್ಚಿನ ಸಿಮ್ ಹೊಂದುವಂತಿಲ್ಲ. ಹೆಚ್ಚಿನ ಸಿಮ್ ಹೊಂದಿದ್ದರೆ ಅವುಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲನೆಗೆ ಒಳಪಡದ ಸಿಮ್ ಸಂಪರ್ಕ ಕಡಿತಗೊಳಿಸಲಾಗುತ್ತದೆ.
ಹೆಚ್ಚಿನ ಸಿಮ್ ಹೊಂದಿದ ಚಂದಾದಾರರು ತಮಗೆ ಯಾವ ಸಿಮ್ ಬೇಕು, ಯಾವುದು ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ವಂಚನೆ, ಆರ್ಥಿಕ ಅಪರಾಧ, ಅನಗತ್ಯ ಕರೆಗಳ ಕಿರಿಕಿರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರಸಂಪರ್ಕ ಇಲಾಖೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.