ಆದಾಯ ತೆರಿಗೆ ನಿಯಮದಂತೆ ನೀವು ಇನ್ಕಮ್ ಟ್ಯಾಕ್ಸ್ ರಿರ್ಟನ್ಸ್ ಪಾವತಿ ಮಾಡೋವಾಗ ನಿಮ್ಮ ಆಧಾರ್ ಕಾರ್ಡ್ ನಂಬರ್, ಪಾನ್ ಕಾರ್ಡ್ ನಂಬರ್ನ್ನ ನಮೂದಿಸೋದು ಕಡ್ಡಾಯ. ಆದರೆ ಐಟಿಆರ್ಗೆ ಆಧಾರ್ ಕಾರ್ಡ್ ನೋಂದಾವಣೆ ಹೇಗೆ ಮಾಡಬೇಕು ಅನ್ನೋ ಗೊಂದಲ ಅನೇಕರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಮೊದಲು https://www.incometaxindiaefiling.gov.in/home ವೆಬ್ಸೈಟ್ಗೆ ಲಾಗಿನ್ ಆಗಿ. ಹೋಂ ಪೇಜ್ನಲ್ಲೇ ನಿಮಗೆ ಪ್ರೊಫೈಲ್ ಸೆಟ್ಟಿಂಗ್ ಎಂಬ ಆಯ್ಕೆ ಕಾಣಸಿಗುತ್ತೆ . ಅದರಲ್ಲಿ ಲಿಂಕ್ ಆಧಾರ್ನ್ನು ಆಯ್ಕೆ ಮಾಡಿದೆ.
ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ ಬಳಿಕ ಲಿಂಕ್ ನೌ ಆಪ್ಶನ್ನ್ನು ಒತ್ತಿರಿ. ಬಳಿಕ ನಿಮ್ಮ ಆಧಾರ್ ಕಾರ್ಡ್ ವಿವರಣೆ ಹಾಗೂ ಪಾನ್ ಕಾರ್ಡ್ ಮಾಹಿತಿಯನ್ನ ನಮೂದಿಸಿ. ಇದಾದ ಬಳಿಕ ನಿಮಗೆ ಐಟಿಆರ್ ಪರಿಶೀಲನೆಗಾಗಿ ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನ ಟೈಪ್ ಮಾಡಿದ ಬಳಿಕ ನಿಮ್ಮ ಆಧಾರ್ ಕಾರ್ಡ್ ಐಟಿಆರ್ಗೆ ಲಿಂಕ್ ಆಗಲಿದೆ.