alex Certify ಉತ್ಪಾದನೆಯಲ್ಲಿ ಶೇ.40 ರಷ್ಟು ಕುಸಿತಕ್ಕೆ ಕಾರಣವಾಯ್ತು ಕೇವಲ 1 ಕೊರೊನಾ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ಪಾದನೆಯಲ್ಲಿ ಶೇ.40 ರಷ್ಟು ಕುಸಿತಕ್ಕೆ ಕಾರಣವಾಯ್ತು ಕೇವಲ 1 ಕೊರೊನಾ ಪ್ರಕರಣ

ಆಗಸ್ಟ್​ ತಿಂಗಳ ಆರಂಭದಲ್ಲಿ ಹ್ಯಾನೋಯಿಯನ್ನು ವಿಯೆಟ್ನಾಂ ಬಂದರು ನಗರವಾದ ಹೈಫಾಂಗ್​​ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿರುವ ಟೋಯೋಟೋ ಕಾರ್ಖಾನೆಯಲ್ಲಿ ಓರ್ವ ಕಾರ್ಮಿಕ ಕೋವಿಡ್​ 19 ಸೋಂಕಿಗೆ ಒಳಗಾಗಿದ್ದರು. ಈ ಸಮಯದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿಯು ವೇಗವಾಗಿ ಹಬ್ಬುತ್ತಿತ್ತು. ಹೀಗಾಗಿ ಕಾರ್ಖಾನೆ ಕೆಲಸವನ್ನು ಆಗಸ್ಟ್​ 4ರಂದು ಸ್ಥಗಿತಗೊಳಿಸಲಾಯ್ತು.

ಟೋಯೋಟಾ ಮೋಟಾರ್ಸ್​ನ ಚೀಫ್​ ಪರ್ಚೆಸಿಂಗ್​ ಗ್ರೂಪ್​ ಆಫೀಸರ್​ ಕಝುನಾರಿ ಕುಮಕುರಾ ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಕಾರ್ಖಾನೆಯನ್ನು ಸ್ಥಗಿತಗೊಳಿಸಿದ್ದರಿಂದ ಕಾರು ತಯಾರು ಮಾಡುವುದಕ್ಕೆ ತುಂಬಾನೇ ಅಡಚಣೆ ಉಂಟಾಗಿತ್ತು. ಅನೇಕ ಬಿಡಿಭಾಗಗಳನ್ನು ಹೊಂದಿಸುವುದು ಕಂಪನಿಗೆ ಅಸಾಧ್ಯವಾಗಿ ಹೋಗಿತ್ತು.

ವಿಯೆಟ್ನಾಂನಿಂದ ವೈರ್​ಗಳು ಹಾಗೂ ಮಲೇಷಿಯಾದಿಂದ ಚಿಪ್​ಗಳು ಸೇರಿದಂತೆ ಹಲವಾರು ಬಿಡಿಭಾಗಗಳಿಗೆ ಕೊರತೆ ಕಂಡುಬಂದಿತ್ತು. ಕೇವಲ ಒಂದೇ ಒಂದು ಕೊರೊನಾ ಕೇಸ್​ನಿಂದ ಆರಂಭವಾದ ಈ ಅಡಚಣೆಯು ವಿಶ್ವದ ನಂ.1 ವಾಹನ ತಯಾರಕ ಕಂಪನಿಗೆ ಭಾರೀ ದೊಡ್ಡ ಹೊಡೆತವನ್ನೇ ನೀಡಿತ್ತು.

ಈ ಹಿಂದಿನ ಕಾರು ಉತ್ಪಾದನೆ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಟೋಯೋಟಾ ಕಂಪನಿಯು ಸೆಪ್ಟೆಂಬರ್​​ ತಿಂಗಳಲ್ಲಿ ಕಾರು ಉತ್ಪಾದನೆಯಲ್ಲಿ 40 ಪ್ರತಿಶತ ಕುಸಿತ ಕಾಣುವುದರ ಮೂಲಕ ಆಟೋಮೊಬೈಲ್​ ಕ್ಷೇತ್ರವೇ ಆಶ್ಚರ್ಯ ಪಡುವಂತೆ ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...