ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ನಿರಂತರ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಬ್ಬಿಣ, ಪ್ಲಾಸ್ಟಿಕ್, ಉಕ್ಕು ವಸ್ತುಗಳ ಮೇಲೆ ಆಮದು ಸುಂಕವನ್ನು ಮನ್ನಾ ಮಾಡಿ, ರಫ್ತು ಸುಂಕ ಹೆಚ್ಚಿಸಿದೆ.
ಇದರ ಬೆನ್ನಲ್ಲೇ ಕೆಲವು ರಾಜ್ಯ ಸರ್ಕಾರಗಳು ವ್ಯಾಟ್ ಕಡಿಮೆ ಮಾಡಿದ್ದು, ಇಂಧನ ದರ ಇಳಿಕೆಯಾಗಿದೆ. ಇದರೊಂದಿಗೆ ಕಚ್ಚಾ ವಸ್ತುಗಳ ದರವೂ ಕೂಡ ಸಹಜವಾಗಿ ಇಳಿಕೆಯಾಗುತ್ತಿದೆ.
ಮನೆ ನಿರ್ಮಿಸುವ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್ ಮತ್ತು ಕಬ್ಬಿಣ ದರದಲ್ಲಿ ಅಲ್ಪ ಇಳಿಕೆಯಾಗಿದ್ದು, ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಿಮೆಂಟ್ ದರ ಪ್ರತಿ ಚೀಲಕ್ಕೆ 5- 8 ರೂಪಾಯಿಯಷ್ಟು ಕಡಿಮೆಯಾಗಿದೆ. ಕಬ್ಬಿಣ ಕೆಜಿಗೆ 4 -6 ರೂಪಾಯಿವರೆಗೂ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಕಬ್ಬಿಣದ ಮೇಲೆ ಹೆಚ್ಚಿನ ರಫ್ತು ಸುಂಕ ವಿಧಿಸಿದ್ದರಿಂದ ಉಕ್ಕಿನ ಬೆಲೆ ಶೇ. 10 ರಿಂದ 15 ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.