ಬೆಂಗಳೂರು: ಹೊಸ ಮನೆ, ಫ್ಲ್ಯಾಟ್ ಗಳ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮನೆಗಳ ದರ ಶೇಕಡ 6 ರಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಫ್ಲ್ಯಾಟ್ ಗಳ ಮಾರಾಟ ಶೇಕಡ 7 ರಷ್ಟು ಹೆಚ್ಚಾಗಿದೆ. ಪ್ರಾಪರ್ಟಿ ಬ್ರೋಕರೇಜ್ ಸಂಸ್ಥೆ ಪ್ರಾಪ್ ಟೈಗರ್ ಡಾಟ್ ಕಾಂ ನೀಡಿರುವ ಮಾಹಿತಿ ಪ್ರಕಾರ, 2021 ರಲ್ಲಿ ಬೆಂಗಳೂರಿನಲ್ಲಿ ಹೌಸಿಂಗ್ ದರಗಳಲ್ಲಿ ಶೇಕಡ 6 ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಮನೆಗಳ ಮಾರಾಟದಲ್ಲಿ ಶೇ. 7 ರಷ್ಟು ಜಾಸ್ತಿ ಆಗಿದೆ. 2022 ರಲ್ಲಿಯೂ ಮನೆ, ಫ್ಲ್ಯಾಟ್ ಗಳ ದರ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.