ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ ಹಾಂಕಾಂಗ್ ನವೆಂಬರ್ 10ರವರೆಗೆ ಮುಂಬೈನಿಂದ ಏರ್ ಇಂಡಿಯಾ ವಿಮಾನಗಳನ್ನ ಆಗಮನವನ್ನ ನಿಷೇಧಿಸಿದೆ. ಈ ರೀತಿ ಕೊರೊನಾ ಕಾರಣದಿಂದಾಗಿ ನಾಲ್ಕನೇ ಬಾರಿಗೆ ಭಾರತದಿಂದ ಏರ್ ಇಂಡಿಯಾ ವಿಮಾನಗಳ ಆಗಮನಕ್ಕೆ ಹಾಂಕಾಂಗ್ ಸರ್ಕಾರ ನಿಷೇಧ ಹೇರಿದೆ.
ಈ ಹಿಂದೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 3, ಆಗಸ್ಟ್ 18-ಆಗಸ್ಟ್ 31 ಹಾಗೂ ಅಕ್ಟೋಬರ್ 13-ಅಕ್ಟೋಬರ್ 30ರವರೆಗೆ ನಿಷೇಧ ಹೇರಲಾಗಿತ್ತು.
ಪ್ರಯಾಣ ನಡೆಸಿದ 72 ಗಂಟೆಯ ಒಳಗೆ ಪ್ರಯಾಣಿಕ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಪಡೆಯಲು ಯಶಸ್ವಿಯಾದರೆ ಆಗ ಮಾತ್ರ ಭಾರತದ ಪ್ರಯಾಣಿಕ ಹಾಂಕಾಂಗ್ ಒಳಕ್ಕೆ ಬರಲು ಅರ್ಹರು ಅಂತಾ ಜುಲೈನಲ್ಲಿ ಹಾಂಕಾಂಗ್ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಪ್ರಯಾಣ ಕೈಗೊಂಡ ಪ್ರತಿಯೊಬ್ಬ ಪ್ರಯಾಣಿಕನಿಗೂ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು.