ನವದೆಹಲಿ: ದೇಶದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಬ್ರಾಂಡ್ ಗಳ ಜೇನುತುಪ್ಪದಲ್ಲಿ ಕಲಬೆರಕೆ ಇರುವುದು ಕಂಡುಬಂದಿದೆ.
ಪರಿಶುದ್ಧವೆಂದು ಹೇಳಲಾಗುವ ಬ್ರಾಂಡ್ ಗಳ ಜೇನುತುಪ್ಪದಲ್ಲಿ ಸಕ್ಕರೆ ಅಂಶ ಇರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ವಿಜ್ಞಾನ ಮತ್ತು ಪರಿಸರ ಕೇಂದ್ರ(CSE) ಈ ಕುರಿತು ಮಾಹಿತಿ ನೀಡಿದೆ. ಕೇಂದ್ರದ ಸಂಶೋಧಕರು 13 ಪ್ರಮುಖ ಮತ್ತು ಸಣ್ಣ ಬ್ರಾಂಡ್ ಜೇನುತುಪ್ಪದ ಪರಿಶುದ್ಧತೆಯನ್ನು ಪರೀಕ್ಷಿಸಿದ್ದಾರೆ. ಶೇಕಡ 77 ರಷ್ಟು ಸ್ಯಾಂಪಲ್ ಗಳಲ್ಲಿ ಕಲಬೆರಕೆ ಇರುವುದು ಪತ್ತೆಯಾಗಿದೆ.
ಸಕ್ಕರೆ ಪಾಕವನ್ನು ಜೇನುತುಪ್ಪದಲ್ಲಿ ಮಿಶ್ರಣ ಮಾಡಲಾಗಿದೆ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಪ್ರಸಿದ್ಧ ಕಂಪನಿಗಳ ಜೇನುತುಪ್ಪ ಕಲಬೆರಕೆಯಾಗಿದೆ. ಅದರಲ್ಲಿ ಸಕ್ಕರೆ ಪಾಕವನ್ನು ಗೊತ್ತಾಗದಂತೆ ಮಿಶ್ರಣ ಮಾಡಿರುವುದು ಕಂಡುಬಂದಿದೆ.
ಪರೀಕ್ಷೆಯಲ್ಲಿ ಪತ್ತೆಮಾಡಲು ಸಾಧ್ಯವಾಗದಂತಹ ಸಕ್ಕರೆ ಪಾಕವನ್ನು ಸಿದ್ಧಪಡಿಸಲಾಗಿದೆ. ಪೇಂಟ್ ನಲ್ಲಿ ಬಳಸುವ ದ್ರಾವಣ ಇದೆಂದು ವಂಚಿಸಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಪ ಪ್ರಮಾಣದ ಜೇನುತುಪ್ಪದಲ್ಲಿ ಈ ಸಕ್ಕರೆ ಪಾಕ ಮಿಕ್ಸ್ ಮಾಡಿದ್ರೆ ಸೇಮ್ ಜೇನುತುಪ್ಪದಂತೆಯೇ ಇರುತ್ತೆ. ಗುಣಮಟ್ಟ ಪರೀಕ್ಷೆಯಲ್ಲಿ ಗೊತ್ತಾಗುವುದೂ ಇಲ್ಲ. ಆ ರೀತಿಯ ಪಾಕ ಸಿದ್ಧಪಡಿಸಲಾಗುವುದು ಎನ್ನುವುದು ತಿಳಿದು ಬಂದಿದೆ.
ಇದೊಂದು ಅಪಾಯಕಾರಿ ಫಲಿತಾಂಶವಾಗಿದೆ. ಆರೋಗ್ಯದ ಮೇಲೆ ಇದುವರೆಗೂ ಆಗದ ಹೆಚ್ಚಿನ ಅಪಾಯ ಉಂಟು ಮಾಡಬಹುದು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ಪ್ರಧಾನ ನಿರ್ದೇಶಕಿ ಸುನಿತಾ ನಾರಾಯಣ್ ಮಾಹಿತಿ ನೀಡಿದ್ದಾರೆ.