alex Certify ಹೋಂಡಾ ಕಾರು ಹೊಂದಿರುವವರಿಗೊಂದು ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಂಡಾ ಕಾರು ಹೊಂದಿರುವವರಿಗೊಂದು ಬಹುಮುಖ್ಯ ಮಾಹಿತಿ

ಆಟೋ ಮೊಬೈಲ್​ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಹೋಂಡಾ ಶುಕ್ರವಾರ 77,954 ಆಯ್ದ ಕಾರುಗಳಿಗೆ ಇಂಧನ ಪಂಪ್​ ಬದಲು ಮಾಡಿಕೊಡುವುದಕ್ಕಾಗಿ ಕರೆ ಮಾಡಿದೆ.

ಈ ಆಯ್ದ ವಾಹನಗಳಿಗೆ ಅಳವಡಿಸಲಾಗಿದ್ದ ಫ್ಯೂಯಲ್​ ಪಂಪ್​​ಗಳಲ್ಲಿ ದೋಷವಿದೆ. ಇದರಿಂದಾಗಿ ಇಂಜಿನ್​ ಸ್ಟಾರ್ಟ್​ ಹಾಗೂ ಸ್ಟಾಪ್​ ಮಾಡಲು ಕಾರು ಮಾಲೀಕರಿಗೆ ಕಷ್ಟವಾಗ್ತಿದೆ. ಈ ಕಾರಣಕ್ಕೆ ಫ್ಯೂಯಲ್​ ಪಂಪ್​ಗಳನ್ನ ಬದಲಿ ಮಾಡಲು ಕಂಪನಿ ನಿರ್ಧರಿಸಿದೆ.

ಕಾರು ಮಾಲೀಕರಿಗೆ ವೈಯಕ್ತಿಕವಾಗಿ ಕರೆ ಮಾಡಿ ಫ್ಯೂಯಲ್ ಪಂಪ್​ ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗುತ್ತೆ. ಹಾಗೂ ಹೆಚ್​ಸಿಐಎಲ್​ ಡೀಲರ್​ ಶಿಪ್​ನಲ್ಲಿ ಈ ಬದಲಿ ಕಾರ್ಯವನ್ನ ಉಚಿತವಾಗಿ ಮಾಡಿಕೊಡಲಾಗುವುದು ಎಂದು ಕಂಪನಿ ಹೇಳಿದೆ.

ಕೊರೊನಾದ ಹಿನ್ನೆಲೆ ಸಧ್ಯ ಕಡಿಮೆ ಸಿಬ್ಬಂದಿಯ ಹಾಜರಾತಿಯಲ್ಲಿ ಕೆಲಸ ನಡೆಯುತ್ತಿರೋದ್ರಿಂದ ಗ್ರಾಹಕರು ನಿಗದಿತ ಅಪಾಯಿಂಟ್​ಮೆಂಟ್​ ವೇಳೆಗೆ ಬಂದು ಜನಸಂದಣಿಯನ್ನ ತಪ್ಪಿಸಿ ಎಂದು ಕಂಪನಿ ಮನವಿ ಮಾಡಿದೆ.

ಅಮೇಜ್​, ಫೋರ್ಥ್​ ಜನರೇಷನ್​ ಸಿಟಿ, ಹೋಂಡಾ ಡಬ್ಲೂ ಆರ್​ ವಿ, ಜಾಸ್​, ಸಿವಿಕ್​, ಬಿ ಆರ್​ ವಿ ಹಾಗೂ ಸಿಆರ್​ವಿ ಕಾರಿಗಳಿಗೆ ಫ್ಯೂಯಲ್​ ಪಂಪ್​ ಬದಲಾವಣೆ ಮಾಡಲಾಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...