
ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೋಂಡಾ ಆಕ್ಟಿವಾ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹೋಂಡಾ ಆಕ್ಟಿವಾ ತನ್ನ 6ಜಿ ಆವೃತ್ತಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಕ್ಯಾಶ್ಬ್ಯಾಕ್ ನೀಡ್ತಿದೆ. ಫೆಬ್ರವರಿ ತಿಂಗಳಲ್ಲಿ ಈ ಸ್ಕೂಟರ್ ಖರೀದಿ ಮಾಡಿದ್ರೆ ನೀವು 5 ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ಪಡೆಯುತ್ತೀರಿ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಮಾಸಿಕ ಕಂತಿನ ರೂಪದಲ್ಲಿ ಸ್ಕೂಟರ್ ಖರೀದಿಸಿದರೆ ಮಾತ್ರ 5000 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಯೋಜನೆಯಡಿ ಸ್ಕೂಟರ್ ಖರೀದಿಸಲು ಕಂಪನಿಯು ಶೇಕಡಾ 100ರಷ್ಟು ಹಣಕಾಸಿನ ಸೌಲಭ್ಯವನ್ನು ಒದಗಿಸುತ್ತಿದೆ. ಇದಲ್ಲದೆ ಕಂಪನಿಯು ಹೆಚ್ಚು ಮಾರಾಟವಾಗುವ ಬೈಕ್ ಹೋಂಡಾ ಶೈನ್ 125 ಸಿಸಿ ಯಲ್ಲೂ ಇದೇ ಆಫರ್ ನೀಡುತ್ತಿದೆ. ಅಲ್ಲದೆ ಶೈನ್ ನಲ್ಲಿ 2499 ರೂಪಾಯಿ ಡೌನ್ಪೇಮೆಂಟ್ ಸೌಲಭ್ಯ ನೀಡ್ತಿದೆ.
ಮನೆ ಖರೀದಿಸುವವರಿಗೆ SBI ನಿಂದ ಭರ್ಜರಿ ಬಂಪರ್ ಸುದ್ದಿ
ಹೋಂಡಾ ಆಕ್ಟಿವಾ 6 ಜಿ ಸ್ಟ್ಯಾಂಡರ್ಡ್ ಮತ್ತು ಡಿಎಲ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ. ಇದರ ಬೆಲೆ ಕ್ರಮವಾಗಿ 66,816 ರೂಪಾಯಿ ಮತ್ತು 68,316 ರೂಪಾಯಿ. 8 ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದೆ.