alex Certify ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಫೈನಾನ್ಸ್ ಕಂಪನಿಗೆ ದಂಡ, ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಫೈನಾನ್ಸ್ ಕಂಪನಿಗೆ ದಂಡ, ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶ

ಧಾರವಾಡ: ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಇಂಡಿಯಾ ಬುಲ್ಸ್ ಫೈನಾನ್ಸ್ ಕಂಪನಿಗೆ ಪರಿಹಾರ ಮತ್ತು ದಂಡ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ನೀಡಿದೆ.

ಹುಬ್ಬಳ್ಳಿಯ ಸಂತೋಷ ಜೈನ್ ಎನ್ನುವವರು 2018 ರಲ್ಲಿ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ನವರಿಂದ 1 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಒಪ್ಪಂದದ ಪ್ರಕಾರ ಸಾಲದ ಮೇಲೆ ಶೇ.9.5%ರಂತೆ ಬಡ್ಡಿ ಸಮೇತ ಲೆಕ್ಕ ಹಾಕಿ 1,04,422 ರೂ. ರಂತೆ 180 ಕಂತುಗಳನ್ನು ಸಾಲಗಾರ ಮರುಪಾವತಿ ಮಾಡುತ್ತಿದ್ದರು. 27 ಕಂತುಗಳನ್ನು ಸಾಲಗಾರ ಕಟ್ಟಿದ ನಂತರ ಅವರ ಅನುಮತಿ ಇಲ್ಲದೇ ಉಳಿದ ಕಂತುಗಳ ಮೇಲೆ ಶೇ.12.30% ರಷ್ಟು ಬಡ್ಡಿ ಹೆಚ್ಚಿಸಲಾಗಿದೆ.

ಅದಕ್ಕೆ ಒಪ್ಪದ ಸಾಲಗಾರ ಬಾಕಿ ಉಳಿದ ಸಾಲದ ಹಣವನ್ನು ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ರವರಿಗೆ ಮರುಪಾವತಿ ಮಾಡಿದರು. ಆ ಅವಧಿ ಪೂರ್ವ ಮರುಪಾವತಿಯ ಮೇಲೆ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್‍ ನಿಂದ 3,48,815 ರೂ. ದಂಡ ಹಾಕಿದ್ದರು. ಆ ರೀತಿ ಮರುಪಾವತಿಯ ಮೇಲೆ ದಂಡ ಹಾಕಿರುವುದು ರಿಸರ್ವ್ ಬ್ಯಾಂಕ್ ನಿಯಮಕ್ಕೆ ವಿರುದ್ಧವಾದುದು.

ಈ ಕಾರಣ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್‍ ರವರಿಂದ ತನಗೆ ಸೇವಾ ನ್ಯೂನ್ಯತೆ ಆಗಿ ಮೋಸವಾಗಿದೆ ಅಂತಾ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು.ಸಿ. ಹಿರೇಮಠ ಅವರು ದೂರುದಾರರ ಅನುಮತಿ ಇಲ್ಲದೇ ಬಾಕಿ ಉಳಿದ ಸಾಲದ ಮೇಲೆ ಶೇ.12.30% ರಂತೆ ಬಡ್ಡಿದರ ಹೆಚ್ಚಿಸಿರುವುದು ತಪ್ಪು. ಕಾರಣ ಸಾಲಗಾರ ತನ್ನ ಬಾಕಿ ಉಳಿದ ಸಾಲವನ್ನು ಮರುಪಾವತಿ ಮಾಡಿದ್ದು ಸರಿ ಇರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ.

ಅದರ ಮೇಲೆ 3,48,815 ರೂ. ದಂಡ ಹಾಕಿರುವುದು ರಿಸರ್ವ್ ಬ್ಯಾಂಕಿನ ನಿಯಮಕ್ಕೆ ವಿರುದ್ಧವಾದುದು ಎಂದು  ಹೇಳಿ ಅದರಿಂದ ಗ್ರಾಹಕನಾದ ದೂರುದಾರನಿಗೆ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್‍ ರವರು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ಆಯೋಗ ತೀರ್ಪು ನೀಡಿದೆ.

ಅದಕ್ಕಾಗಿ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್‍ ನವರು ದೂರುದಾರರಿಗೆ 3,48,815 ರೂ. ಮರುಪಾವತಿಸುವಂತೆ ಹಾಗೂ ದೂರುದಾರರಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ 50 ಸಾವಿರ ರೂಪಾಯಿ ಪರಿಹಾರಕೊಡುವಂತೆ ಮತ್ತು 10 ಸಾವಿರ ರೂಪಾಯಿ ಈ ಪ್ರಕರಣದ ಖರ್ಚು ವೆಚ್ಚ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...