![](https://kannadadunia.com/wp-content/uploads/2019/06/banks-555_081618125834_120618054426_052919075402_060619124038.jpg)
ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಇರಲಿದ್ದು, ನಿಮ್ಮ ಯಾವುದೇ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎನ್ನಲಾಗಿದೆ.
ಆಗಸ್ಟ್ 1 ರಂದು ಶನಿವಾರ ಬಕ್ರೀದ್, ಆಗಸ್ಟ್ 2 ರಂದು ಭಾನುವಾರ, ಆಗಸ್ಟ್ 3 ರಂದು ರಕ್ಷಾಬಂಧನ, ಆಗಸ್ಟ್ 8 ರಂದು 2 ನೇ ಶನಿವಾರ, ಆಗಸ್ಟ್ 9 ಭಾನುವಾರ, 11/12 ರಂದು ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 16 ಭಾನುವಾರ, ಆಗಸ್ಟ್ 22 ಗಣೇಶ ಚತುರ್ಥಿ, ಆಗಸ್ಟ್ 23 ಭಾನುವಾರ, ಆಗಸ್ಟ್ 29 ರಂದು 4 ನೇ ಶನಿವಾರ, 30 ರಂದು ಭಾನುವಾರ ರಜೆ ಇರುತ್ತದೆ.
ಆಗಸ್ಟ್ 8 ಎರಡನೇ ಶನಿವಾರ, ಆಗಸ್ಟ್ 29 ರಂದು 4 ನೇ ಶನಿವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. 5 ಭಾನುವಾರ ಜೊತೆಗೆ ಬಕ್ರೀದ್, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ರಕ್ಷಾಬಂಧನ ಕೃಷ್ಣಾ ಜನ್ಮಾಷ್ಟಮಿಗೆ ರಜೆ ಇರಲಿದೆ ಎನ್ನಲಾಗಿದೆ.
ಆಯಾ ಪ್ರದೇಶ ಮತ್ತು ಬ್ಯಾಂಕುಗಳಿಗೆ ಅನುಗುಣವಾಗಿ ರಜೆಯಲ್ಲಿ ಬದಲಾವಣೆಯಾಗಲಿದೆ. ಆಗಸ್ಟ್ ತಿಂಗಳಲ್ಲಿ 10 -12 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳು ಇದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.