alex Certify ಧೂಮಪಾನಿಗಳಿಗೆ ಮುಖ್ಯ ಮಾಹಿತಿ: ಬಾಯಿ ಸುಡಲಿದೆ ಸಿಗರೇಟ್, ಬೀಡಿ, ತಂಬಾಕು; ಸುಂಕ ಹೆಚ್ಚಳಕ್ಕೆ ಶಿಫಾರಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೂಮಪಾನಿಗಳಿಗೆ ಮುಖ್ಯ ಮಾಹಿತಿ: ಬಾಯಿ ಸುಡಲಿದೆ ಸಿಗರೇಟ್, ಬೀಡಿ, ತಂಬಾಕು; ಸುಂಕ ಹೆಚ್ಚಳಕ್ಕೆ ಶಿಫಾರಸು

ನವದೆಹಲಿ: ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಬೇಕೆಂದು ಆರ್ಥಿಕ ತಜ್ಞರು ಮತ್ತು ವೈದ್ಯರು ಶಿಫಾರಸು ಮಾಡಿದ್ದಾರೆ.

ಮುಂದಿನ ಬಜೆಟ್ ನಲ್ಲಿ ಸಿಗರೇಟ್ ಮತ್ತು ಬೀಡಿ ಹಾಗೂ ಹೊಗೆರಹಿತ ತಂಬಾಕು ಉತ್ಪನ್ನಗಳ ಸುಂಕವನ್ನು ಹೆಚ್ಚಳ ಮಾಡಬೇಕೆಂದು ಹಣಕಾಸು ಮಂತ್ರಾಲಯಕ್ಕೆ ಮನವಿ ಮಾಡಲಾಗಿದೆ. ಇದರಿಂದ ಕಂದಾಯ ಸಂಗ್ರಹದ ಕೊರತೆ ನಿಭಾಯಿಸಬಹುದು, ತಂಬಾಕು ಬಳಕೆ ಕಡಿವಾಣ ಹಾಕಬಹುದು, ಸಂಬಂಧಿತ ರೋಗಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ.

ಕೊರೋನಾದಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿ ಸಂಪನ್ಮೂಲಕ್ಕೆ ಹೊಡೆತ ಬಿದ್ದಿದೆ. ಇದನ್ನು ತಪ್ಪಿಸಲು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಬೇಕೆಂದು ವ್ಯಾಲೆಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿದೆ.

ತಂಬಾಕಿನಿಂದ ಬರುವ ತೆರಿಗೆ ಆದಾಯವು ಸಾಂಕ್ರಾಮಿಕ ಸಮಯದಲ್ಲಿ ಲಸಿಕೆಗಳು ಮತ್ತು ಆರೋಗ್ಯ ಮೂಲ ಸೌಕರ್ಯವನ್ನು ಹೆಚ್ಚಿಸುವುದು ಸೇರಿದಂತೆ ಸಂಪನ್ಮೂಲಗಳ ಹೆಚ್ಚಿದ ಅಗತ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬಹುದು ಎಂದು ಭಾರತದ ಸ್ವಯಂಸೇವಾ ಆರೋಗ್ಯ ಸಂಘದ ಮುಖ್ಯ ಕಾರ್ಯನಿರ್ವಾಹಕ ಭಾವನಾ ಮುಖೋಪಾಧ್ಯಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...