ರಾಮನಗರ: ಇಂದಿನಿಂದಲೇ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ. ವಿರೋಧದ ನಡುವೆಯೂ ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಲಿದೆ. ನಿಡಘಟ್ಟವರೆಗಿನ 56 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಕಾರ್ ಗಳಿಗೆ 135 ರೂ.ಶುಲ್ಕ ನಿಗದಿಪಡಿಸಲಾಗಿದೆ.
ಲಘುವಾಹನ, ಮಿನಿ ಬಸ್ ಗಳಿಗೆ 280 ರೂ., ಬಸ್, ಟ್ರಕ್ ಗಳಿಗೆ 460 ರೂ., 3 ಆಕ್ಸೆಲ್ ವಾಹನಗಳಿಗೆ 500 ರೂ., ಭಾರಿ ನಿರ್ಮಾಣ ವಾಹನಗಳಿಗೆ 720 ರೂ. ಹಾಗೂ ಅತಿ ಗಾತ್ರದ ವಾಹನಗಳಿಗೆ 880 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಮಾ. 14 ರ ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಆರಂಭವಾಗಲಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ದಶಪಥ ಹೆದ್ದಾರಿ ಉದ್ಘಾಟಿಸಿದ್ದರು. ಮಾರ್ಚ್ 1 ರಿಂದಲೇ ಟೋಲ್ ಸಂಗ್ರಹಕ್ಕೆ ನಿರ್ಧರಿಸಲಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹವನ್ನು ಮುಂದೂಡಲಾಗಿತ್ತು.