ಹೋಂಡಾ ಮೋಟರ್ ಸೈಕಲ್ ಭಾರತದಲ್ಲಿ 2.5 ಕೋಟಿಗೂ ಅಧಿಕ ಗ್ರಾಹಕರಿಗೆ ತನ್ನ ಆಕ್ಟಿವಾ ಸ್ಕೂಟರ್ಗಳನ್ನ ಮಾರಾಟ ಮಾಡಿದೆ ಎಂದು ಗುರುವಾರ ತಿಳಿಸಿದೆ. ಅಲ್ಲದೇ ಭಾರತದ ದ್ವಿಚಕ್ರ ವಾಹನ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2001ರಲ್ಲಿ ಆಕ್ಟಿವಾ ಸ್ಕೂಟರ್ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದ ಹೋಂಡಾ ಮೋಟರ್ ಸೈಕಲ್ 1 ಕೋಟಿ ಗ್ರಾಹಕರ ಗುರಿಯನ್ನ ತಲುಪಲು 15 ವರ್ಷ ತೆಗೆದುಕೊಂಡಿತ್ತು. 2015 ರಿಂದ 2020ರ ಅವಧಿಯಲ್ಲಿ ಹೆಚ್ಚುವರಿ 1.5 ಕೋಟಿ ಗ್ರಾಹಕರನ್ನ ಶರವೇಗದಲ್ಲಿ ಸಂಪಾದಿಸಿದೆ.
2001-02ನೇ ಸಾಲಿನಲ್ಲಿ 5500 ಯುನಿಟ್ಸ್, 2005-06ರಲ್ಲಿ 10 ಲಕ್ಷ ಮೈಲ್ಸ್ಟೋನ್, 2008-09ರಲ್ಲಿ ಸೆಕೆಂಡ್ ಜನರೇಷನ್ ಆಕ್ಟಿವ್ ಹೋಂಡಾ ಲೋಕಾರ್ಪಣೆ, 2012-13ರಲ್ಲಿ 50 ಲಕ್ಷ ಮಾರಾಟ, 2013-14ರಲ್ಲಿ ಹೊಂಡಾ ಎಕೊ ತಂತ್ರಜ್ಞಾನದ ಪರಿಚಯ, 2014-15ಕ್ಕೆ ಹೊಂಡಾ ಆಕ್ಟಿವಾ 125 ಲೋಕಾರ್ಪಣೆ, 2015 -16ರಲ್ಲಿ 1 ಕೋಟಿ ಮಾರಾಟ 2016ರಲ್ಲಿ 4 ಜಿ ಹಾಗೂ 2017ರಲ್ಲಿ 5ಜಿ ಲೋಕಾರ್ಪಣೆ, 2020ರಲ್ಲಿ ಹೊಂಡಾ ಆಕ್ಟಿವಾ 6 ಜಿ ಮಾರುಕಟ್ಟೆಗೆ ಲಗ್ಗೆ, ಜೊತೆಗೆ 2.5 ಕೋಟಿ ಮೈಲಿಗಲ್ಲನ್ನು ತಲುಪಿದೆ.