ನವದೆಹಲಿ: ಕೊರೊನಾ ಕಂಠಕದಲ್ಲಿ ಜನರು ತತ್ತರಿಸಿರುವ ನಡುವೆಯೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಪ್ರಾರಂಭಿಸಿವೆ.
ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ಡೆಪಾಸಿಟ್ ಮಾಡಿದಲ್ಲಿ ಶುಲ್ಕ ಆಕರಿಸಲು ಇತ್ತೀಚೆಗೆ ಬ್ಯಾಂಕ್ ಆಫ್ ಬರೋಡಾ ಆದೇಶ ಹೊರಡಿಸಿತ್ತು. ನಂತರ ಅದು ಭಾರಿ ಮೊತ್ತದ ಠೇವಣಿಗೆ ಮಾತ್ರ ಎಂದು ಸ್ಪಷ್ಟನೆ ನೀಡಿದೆ.
ಐಸಿಐಸಿಐ ಬ್ಯಾಂಕ್ ರಜಾ ದಿನಗಳಲ್ಲಿ ಹಾಗೂ ಕಚೇರಿ ಅವಧಿ ಮುಗಿದ ನಂತರ ಯಂತ್ರದ ಮೂಲಕ ಹಣ ಜಮಾ ಮಾಡಿದರೂ ಕನ್ವೀನಿಯನ್ಸ್ ಶುಲ್ಕ ಆಕರಿಸಲು ನವೆಂಬರ್ 1 ರಿಂದ ಪ್ರಾರಂಭಿಸಿದೆ. ಬ್ಯಾಂಕ್ ಸೇವಾ ದಿನದಲ್ಲಿ ಸಾಯಂಕಾಲ 6 ರಿಂದ ಬೆಳಗ್ಗೆ 8 ರವರೆಗೆ 10 ಸಾವಿರಕ್ಕಿಂತ ಹೆಚ್ಚು ಜಮಾ ಮಾಡುವಾಗ ಪ್ರತಿ ಟ್ರಾನ್ಸಾಕ್ಷನ್ ಗೆ 50 ರೂ. ಶುಲ್ಕ ವಿಧಿಸಲಾಗುತ್ತಿದೆ. ಬ್ಯಾಂಕ್ ಇದಕ್ಕೆ ಕೊರೊನಾ ಕಾರಣ ನೀಡಿ ಆಗಸ್ಟ್ ನಲ್ಲೇ ಆರ್.ಬಿ.ಐ.ನಿಂದ ಅನುಮತಿ ಪಡೆದಿದೆ.
ಎಸ್.ಬಿ.ಐ. ಸೇರಿ ಹಲವು ಸಾರ್ವಜನಿಕ ಬ್ಯಾಂಕ್ ಡೆಬಿಟ್ ರಿಕಾಸ್ಟ್ ಮೇಲೆ 35 ಬೇಸಿಕ್ ಪಾಯಿಂಟ್( ಬಿಪಿಎಸ್) ವಿಧಿಸಲಾರಂಭಿಸಿವೆ. ಕೆಲ ಖಾಸಗಿ ಬ್ಯಾಂಕ್ ಗಳು ಸಾಲದ ಮೇಲೆ ಶೇ. 0.5 ರಷ್ಟು ಹೆಚ್ಚುವರಿ ಬಡ್ಡಿ ಆಕರಿಸಲಾರಂಭಿಸಿವೆ. ಮತ್ತು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿವೆ.
ಸಾರ್ವಜನಿಕ ಬ್ಯಾಂಕ್ ಗಳು ತಮ್ಮ ಸೇವಾ ಶುಲ್ಕವನ್ನು ಇತ್ತೀಚೆಗಷ್ಟೇ ಹೆಚ್ಚಿಸಿವೆ. ಮತ್ತು ಆ ಸಂದರ್ಭದಲ್ಲಿ ಸದ್ಯದಲ್ಲಿ ಯಾವುದೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ತಿಳಿಸಿವೆ ಎಂದು ಭಾರತ ಸರ್ಕಾರದ ಆರ್ಥಿಕ ಇಲಾಖೆ ಸ್ಪಷ್ಟನೆ ನೀಡಿದೆ. ಅದರ ನಂತರವೂ ಬ್ಯಾಂಕ್ ಗಳು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ಮುಂದುವರಿಸಿವೆ.