ಬೆಂಗಳೂರು: ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪಘಾತಕ್ಕೀಡಾದವರಿಗೆ ಥರ್ಡ್ ಪಾರ್ಟಿ ವಿಮೆಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಅಪಘಾತವನ್ನುಂಟು ಮಾಡಿದ ವಾಹನದ ಹಿಂಬದಿ ಸವಾರ ಮತ್ತು ಸಹಪ್ರಯಾಣಿಕರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರ ಇಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ತಿಳಿಸಿದೆ.
ಪ್ರತ್ಯೇಕ ವಿಮೆ ಮೊತ್ತವನ್ನು ಭರಿಸಿದಾಗ ಮಾತ್ರ ಹಿಂಬದಿ ಸವಾರ ಅಥವಾ ಸಹಪ್ರಯಾಣಿಕರಿಗೆ ಪರಿಹಾರ ಸೌಲಭ್ಯ ಅನ್ವಯವಾಗುತ್ತದೆ. ಇಲ್ಲದಿದ್ದರೆ, ವಿಮೆ ಕಂಪನಿ ಪರಿಹಾರ ನೀಡಬೇಕಿಲ್ಲ ಎಂದು ಹೇಳಲಾಗಿದೆ.
ಆಕ್ಟ್ ವಿಮೆಗಳಲ್ಲಿ ಚಾಲಕ, ಸಹಪ್ರಯಾಣಿಕರಿಗೆ ಪರಿಹಾರ ಇಲ್ಲ. ಪ್ರತ್ಯೇಕ ಮೊತ್ತ ಭರಿಸಿದಾಗ ಮಾತ್ರವೇ ವಿಮೆ ಪರಿಹಾರ ಅನ್ವಯವಾಗುತ್ತದೆ. ಥರ್ಡ್ ಪಾರ್ಟಿ ವಿಮೆ ಕಾನೂನಿನಡಿ ಕಡ್ಡಾಯವಾಗಿದೆ. ಆದರೆ, ಖಾಸಗಿ ವಾಹನದ ಡ್ರೈವರ್ ಮತ್ತು ಸಹಪ್ರಯಾಣಿಕರ ವಿಮೆ ಐಚ್ಛಿಕವಾಗಿದೆ. ಅಪಘಾತದಲ್ಲಿ ಮೃತಪಟ್ಟರೆ ವಾಹನ ಮಾಲೀಕರು ಹೊಣೆಯಾಗಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಹಂಚೆಟಿ ಸಂಜೀವಕುಮಾರ್ ತೀರ್ಪು ನೀಡಿದ್ದಾರೆ.