
ಭಾರತದ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್ ಹೀರೋ ಮೋಟೋ ಕಾರ್ಪ್ ಹೊಸ ವರ್ಷದಿಂದ ತನ್ನ ವಾಹನಗಳ ಬೆಲೆಯನ್ನು 1,500 ರೂ.ಗಳವರೆಗೂ ಏರಿಕೆ ಮಾಡಲಿದೆ.
ಸ್ಟೀಲ್, ಅಲ್ಯುಮಿನಿಯಂ, ಪ್ಲಾಸ್ಟಿಕ್ ಹಾಗು ಇತರ ಲೋಹಗಳ ಬೆಲೆಗಳ ಏರಿಕೆಯಾದ ಕಾರಣ ಉತ್ಪಾದನಾ ವೆಚ್ಚದಲ್ಲಿ ಆಗಿರುವ ಏರಿಕೆಯನ್ನು ಸರಿದೂಗಿಸಲು ಈ ಏರಿಕೆ ಮಾಡಬೇಕಾಗಿದೆ ಎಂದು ಹೀರೋ ತಿಳಿಸಿದೆ. ಜನವರಿ 1, 2021ರಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ ಎಂದು ಕಂಪನಿ ತಿಳಿಸಿದೆ.
ಇದೇ ಕಾರಣದಿಂದಾಗಿ ದೇಶದ ಮುಂಚೂಣಿ ಆಟೋಮೊಬೈಲ್ ಸಂಸ್ಥೆಗಳಾದ ಮಹಿಂದ್ರಾ, ಮಾರುತಿ ಸುಜುಕಿ, ಫೋರ್ಡ್ ಇಂಡಿಯಾಗಳೂ ಸಹ ತಮ್ಮ ವಾಹನಗಳ ಬೆಲೆಯನ್ನು ಏರಿಸುವುದಾಗಿ ತಿಳಿಸಿದ್ದವು.