alex Certify ಕಾರ್ಡ್ ಬಳಸದೆ ಎಟಿಎಂನಲ್ಲಿ ಪಡೆಯಬಹುದು ಹಣ…! ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಡ್ ಬಳಸದೆ ಎಟಿಎಂನಲ್ಲಿ ಪಡೆಯಬಹುದು ಹಣ…! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಡ್ ಬಳಸದೇ ಹಣ ಹಿಂಪಡೆಯುವ ಹೊಸ ವಿಧಾನವನ್ನು ಎನ್‌ಸಿಆರ್‌ ಕಾರ್ಪೋರೇಷನ್ ಜಾರಿಗೆ ತರುತ್ತಿದ್ದು, ಈ ಮೂಲಕ ಯುಪಿಐ ಆಧರಿತ ಅಂತರ್‌ನಿರ್ವಹಣಾ ಕಾರ್ಡ್‌ರಹಿತ ಕ್ಯಾಶ್‌ ಹಿಂಪಡೆತದ ವ್ಯವಸ್ಥೆ ಮೂಲಕ ದೇಶದ ಯಾವುದೇ ಮೂಲೆಯಲ್ಲಾದರೂ ನಗದು ಹಿಂಪಡೆಯಬಹುದಾಗಿದೆ.

ಎಟಿಎಂ ಯಂತ್ರಗಳನ್ನು ತಯಾರಿಸುವ ಎನ್‌ಸಿಆರ್‌ ಕಾರ್ಪೋರೇಷನ್ ತಂದಿರುವ ಈ ಆವಿಷ್ಕಾರೀ ಪ್ರಯೋಗದ ಮೂಲಕ ಯುಪಿಐ ಅಪ್ಲಿಕೇಶನ್‌‌ನ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡೆಬಿಟ್ ಕಾರ್ಡ್ ಇಲ್ಲದೇ ದುಡ್ಡು ಹಿಂಪಡೆಯಬಹುದಾಗಿದೆ. ಈ ವ್ಯವಸ್ಥೆಗೆ ಚಾಲನೆ ನೀಡಲು ಎನ್‌ಪಿಸಿಐ ಹಾಗೂ ಸಿಟಿ ಯೂನಿಯನ್ ಬ್ಯಾಂಕ್‌ ಜೊತೆಗೆ ಎನ್‌ಸಿಆರ್‌ ಒಪ್ಪಂದ ಮಾಡಿಕೊಂಡಿದೆ.

ಅದಾಗಲೇ ಈ ಸೇವೆಯನ್ನು ಕೊಡಮಾಡಲು 1500 ಎಟಿಎಂಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯಂತ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು.

ಈ ಪ್ರಕ್ರಿಯೆಯ ಅಡಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಯುಪಿಐ ಅಪ್ಲಿಕೇಶನ್ ತೆರೆದು, ಎಟಿಎಂ ಸ್ಕ್ರೀನ್‌ನಲ್ಲಿ ತೋರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಬೇಕು. ಇದಾದ ಬಳಿಕ ಬಳಕೆದಾರರು ತಾವು ಹಿಂಪಡೆಯಲು ಇಚ್ಛಿಸುವ ಮೊತ್ತವನ್ನು ಎಂಟರ್‌ ಮಾಡಿ ಪ್ರೊಸೀಡ್ ಆಯ್ಕೆ ಒತ್ತಬೇಕು. ಬಳಿಕ 4-6 ಅಂಕಿಯ ಯುಪಿಐ ಪಿನ್ ಎಂಟರ್‌ ಮಾಡಿ ಎಟಿಎಂನಿಂದ ಕ್ಯಾಶ್ ಸಂಗ್ರಹಿಸಬಹುದಾಗಿದೆ. ಆರಂಭಿಕ ಹಂತದಲ್ಲಿ ಬಳಕೆದಾರರು ಒಮ್ಮೆಗೆ 5000 ರೂ.ಗಳನ್ನು ಹಿಂಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...