
ಈ ಹೊಸ ಷರತ್ತು ಹಾಗೂ ನಿಯಮಗಳನ್ನ ಒಪ್ಪಿಕೊಳ್ಳದೇ ಹೋದಲ್ಲಿ ನಿಮ್ಮ ವಾಟ್ಸಾಪ್ ಖಾತೆ ಫೆಬ್ರವರಿ 8ನೇ ತಾರೀಖಿನಿಂದ ಡಿಲೀಟ್ ಆಗಲಿದೆ. ಇದೀಗ ಬಳಕೆದಾರರು ತಾವು ಈ ಷರತ್ತುಗಳನ್ನೆಲ್ಲ ಒಪ್ಪಿಕೊಂಡು ವಾಟ್ಸಾಪ್ ಮೆಸೆಂಜರ್ನ್ನು ಮುಂದುವರಿಸೋದೋ ಇಲ್ಲವೇ ಖಾಸಗಿತನವನ್ನ ಬಿಟ್ಟುಕೊಡದೇ ಬೇರೆ ಮೆಸೆಜಿಂಗ್ ಅಪ್ಲಿಕೇಶನ್ನತ್ತ ಮುಖ ಮಾಡೋದೋ ಎಂಬ ಗೊಂದಲದಲ್ಲಿದ್ದಾರೆ.
ಒಂದು ವೇಳೆ ನೀವು ವಾಟ್ಸಾಪ್ ಖಾತೆಯಿಂದ ಹೊರಗೆ ಬರೋಕೆ ನಿರ್ಧಾರ ಮಾಡಿದ್ದರೆ ನೀವು ವಾಟ್ಸಾಪ್ ಖಾತೆಯನ್ನ ಡಿಲೀಟ್ ಮಾಡಬಹುದಾಗಿದೆ. ಆದರೆ ವಾಟ್ಸಾಪ್ ಕಂಪನಿಯು ನಿಮ್ಮ ಚಾಟ್ ಹಿಸ್ಟರಿ ಬ್ಯಾಕಪ್ಗಳು ಎಸ್ಡಿ ಕಾರ್ಡ್/ ವಾಟ್ಸಾಪ್/ ಡೇಟಾಬೇಸ್/ ಫೋಲ್ಡರ್ನಲ್ಲಿ ಇರಲಿದೆ ಎಂದು ಹೇಳಿದೆ. ನೀವು ಈ ಫೋಲ್ಡರ್ಗಳನ್ನ ಡಿಲೀಟ್ ಮಾಡಬೇಕೆಂದುಕೊಂಡಿದ್ದರೆ ನೀವು ಫೈಲ್ ಮ್ಯಾನೇಜರ್ ಮೂಲಕ ಈ ಕೆಲಸ ಮಾಡಬಹುದಾಗಿದೆ.
ಈ ರೀತಿಯಾಗಿ ನೀವು ವಾಟ್ಸಾಪ್ ಬ್ಯಾಕಪ್ ಡಿಲೀಟ್ ಮಾಡಬಹುದು :
ಫೈಲ್ ಮ್ಯಾನೇಜರ್ನಲ್ಲಿ ವಾಟ್ಸಾಪ್ ಆಯ್ಕೆಯನ್ನ ಓಪನ್ ಮಾಡಿ
ಈ ಫೋಲ್ಡರ್ನಲ್ಲಿ ನಿಮಗೆ ವಾಟ್ಸಾಪ್ಗೆ ಸಂಬಂಧಿಸಿದ ಎಲ್ಲಾ ಸಬ್ಫೋಲ್ಡರ್ಗಳು ಕಾಣಸಿಗಲಿವೆ
ಎಲ್ಲಾ ಸಬ್ ಫೋಲ್ಡರ್ಗಳನ್ನ ಆಯ್ಕೆ ಮಾಡಿ. ಡಿಲೀಟ್ ಮಾಡಿ
ವಾಟ್ಸಾಪ್ ಖಾತೆಯನ್ನ ಡಿಲೀಟ್ ಮಾಡೋದು ಹೇಗೆ..?
ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಮೋರ್ ಆಪ್ಶನ್ ಆಯ್ಕೆ ಕ್ಲಿಕ್ ಮಾಡಿ. ಇದರಲ್ಲಿ ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ ಅಲ್ಲಿ ಅಕೌಂಟ್ ಆಪ್ಶನ್ನಲ್ಲಿ ಡಿಲೀಟ್ ಮೈ ಅಕೌಂಟ್ ಎಂಬ ಆಯ್ಕೆಯನ್ನ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಂತಾರಾಷ್ಟ್ರೀಯ ಮಾದರಿಯಲ್ಲಿ ನೋಂದಾಯಿಸಿ ಬಳಿಕ ಡಿಲೀಟ್ ಮೈ ಅಕೌಂಟ್ ಆಯ್ಕೆ ಕ್ಲಿಕ್ ಮಾಡಿ.
ನೀವು ವಾಟ್ಸಾಪ್ ಖಾತೆಯನ್ನ ಡಿಲೀಟ್ ಮಾಡೋದ್ರಿಂದ ನಿಮ್ಮ ಎಲ್ಲ ವೈಯಕ್ತಿಕ ಸಂದೇಶಗಳು ಹಾಗೂ ಎಲ್ಲಾ ಗ್ರೂಪ್ಗಳ ಸಂದೇಶಗಳು ಶಾಶ್ವತವಾಗಿ ಅಳಿಸಿ ಹೋಗಲಿವೆ. ನಿಮ್ಮ ಗೂಗಲ್ ಡ್ರೈವ್ ಬ್ಯಾಕಪ್ ಕೂಡ ಡಿಲೀಟ್ ಆಗಲಿದೆ.