ಮಧ್ಯಮ ವರ್ಗದ ಮಂದಿಗೆ ಅತ್ಯಂತ ಮುಖ್ಯವಾದ ಸಾಮಾಜಿಕ ಭದ್ರತೆಯ ಹೂಡಿಕೆಗಳಲ್ಲಿ ಒಂದು ಭವಿಷ್ಯ ನಿಧಿ.
ಇದೀಗ ಸಾರ್ವತ್ರಿಕ ಖಾತೆ ಸಂಖ್ಯೆ ನೆರವಿಲ್ಲದೇ ನಿಮ್ಮ ಪಿಎಫ್ ಖಾತೆಯಲ್ಲಿರುವ ಬಾಕಿ ಮೊತ್ತ ತಿಳಿಯಲು ನಾಲ್ಕು ಭಿನ್ನವಾದ ಆಯ್ಕೆಗಳಿವೆ — ಆನ್ಲೈನ್, ಉಮಾಂಗ್ ಅಪ್ಲಿಕೇಶನ್, ಎಸ್‌ಎಂಎಸ್ ಹಾಗೂ ಮಿಸ್ಡ್ ಕಾಲ್.
ಯುಎಎನ್ ಪೋರ್ಟಲ್‌ನಲ್ಲಿ ನೋಂದಣಿಯಾದ ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಂದ ‘EPFOHO UAN’ ಎಂದು ಟೈಪ್ ಮಾಡಿ 7738299899ಗೆ ಎಸ್‌ಎಂಎಸ್ ಮಾಡುವ ಅಥವಾ 011-22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಪಿಎಫ್ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.
ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಅಹ್ವಾನ
ಒಂದು ವೇಳೆ ನೀವು ನಿಮ್ಮ ಯುಎಎನ್ ಮರೆತುಹೋಗಿದ್ದು, ಅದು ನಿಮ್ಮ ಬಳಿ ಸದ್ಯಕ್ಕೆ ಇಲ್ಲದೇ ಹೋದಲ್ಲೂ ಸಹ ನೀವು ನಿಮ್ಮ ಪಿಎಫ್ ಬಾಕಿ ನೋಡಬಹುದಾಗಿದೆ.
ಅದಕ್ಕೆ ಈ ಕೆಳಗಿನ ಸೂಚನೆಗಳು ಪಾಲಿಸಿ:
* ಇಪಿಎಫ್‌ಓ ಅಧಿಕೃತ ಜಾಲತಾಣ https://www.epfindia.gov.in/ಗೆ ಭೇಟಿ ನೀಡಿ.
* “click here to know your PF balance” ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಇಪಿಎಫ್‌ಓ ಲಿಂಕ್ ನಿಮ್ಮನ್ನು ಹೊಸ ಪೇಜ್‌ಗೆ ಕೊಂಡೊಯ್ಯಲಿದೆ.
* ನೀವೀಗ epfoservices.in.epfo ಪುಟಕ್ಕೆ ಬರುವಿರಿ.
* ಅಲ್ಲಿ ನಿಮ್ಮ ರಾಜ್ಯ, ಇಪಿಎಫ್ ಕಾರ್ಯಾಲಯ, ಸಂಸ್ಥೆಯ ಕೋಡ್ ಎಂಟರ್ ಮಾಡಿ.
*ಈಗ ನಿಮ್ಮ ನೋಂದಾಯಿತ ಪಿಎಫ್ ಸಂಖ್ಯೆ, ಹೆಸರು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಮೇಲೆ ಪಂಚ್ ಮಾಡಿ.
* ಈಗ ನಿಮ್ಮ ಸಹಮತಿ ಸೂಚಿಸಲು “I agree” ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಪಿಎಫ್ ಬಾಕಿ ಚೆಕ್ ಮಾಡಬಹುದಾಗಿದೆ.