ಹಲವು ಭಾರತೀಯರು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಈ ಪೈಕಿ ಸುಂದರ್ ಪಿಚೈ ಕೂಡ ಒಬ್ಬರು. ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈ ಅದರ ಬೆಳವಣಿಗೆ ಹಿಂದೆ ಮಹತ್ವದ ಪಾತ್ರ ವಹಿಸಿದ್ದಾರೆ.
2020ರಲ್ಲಿ ಸುಂದರ್ ಪಿಚೈ ಬರೋಬ್ಬರಿ 67 ಕೋಟಿ ರೂಪಾಯಿ ವೇತನವನ್ನು ಪಡೆದಿದ್ದಾರೆ. ಈ ಪೈಕಿ 15 ಕೋಟಿ ರೂಪಾಯಿ ಮೂಲ ವೇತನವಾಗಿದ್ದರೆ ಇತರೆ ಭತ್ಯೆಗಳ ರೂಪದಲ್ಲಿ 52 ಕೋಟಿ ರೂಪಾಯಿ ಪಡೆದಿದ್ದಾರೆ.
ಈ ಮೊದಲು ಆಲ್ಫಾಬೆಟ್ ಸಿಇಓ ಆಗಿದ್ದ ಸುಂದರ್ ಪಿಚೈ ಅವರು ಮೂಲ ವೇತನವಾಗಿ 4.8 ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಆ ಬಳಿಕ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದ ಅವರು 2019ರಲ್ಲಿ 240 ದಶಲಕ್ಷ ಡಾಲರ್ ಪ್ಯಾಕೇಜ್ ಪಡೆದುಕೊಂಡಿದ್ದರು.