![](https://kannadadunia.com/wp-content/uploads/2020/12/twitter-facebook-1608183699.jpg)
ಸ್ಟ್ಟಾಟಿಸ್ಟ್ಯಾ ನೀಡಿದ ವರದಿಯ ಪ್ರಕಾರ ಭಾರತದಲ್ಲಿ ಟ್ವಿಟರ್ ಬಳಕೆದಾರರ ಸಂಖ್ಯೆ 1.89 ಕೋಟಿಯಷ್ಟಾಗಿದೆ. ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಖಾತೆಗಳನ್ನ ಕ್ರಮವಾಗಿ 12.23 ಹಾಗೂ 34.6 ಕೋಟಿಯಷ್ಟು ಮಂದಿ ಬಳಕೆ ಮಾಡುತ್ತಿದ್ದಾರೆ.
ಇನ್ನು ಜಾಗತಿಕ ಮಟ್ಟದಲ್ಲಿ ನೋಡೋದಾದ್ರೆ ಟ್ವಿಟರ್ ವಿಶ್ವಾದ್ಯಂತ 35 ಕೋಟಿ ಬಳಕೆದಾರರನ್ನ ಹೊಂದಿದೆ. ಫೇಸ್ಬುಕ್ ವಿಶ್ವಾದ್ಯಂತ 270 ಕೋಟಿ ಬಳಕೆದಾರರನ್ನ ಹೊಂದಿದೆ. ಇತ್ತ ಇನ್ಸ್ಟಾಗ್ರಾಂ ಕೂಡ 116 ಕೋಟಿ ಖಾತೆಗಳನ್ನ ನಿರ್ವಹಿಸುತ್ತಿದೆ.
ಫೇಸ್ಬುಕ್ ಅತ್ಯಂತ ಹಳೆಯ ಸಾಮಾಜಿಕ ಮಾಧ್ಯಮವಾಗಿದೆ. ಅಲ್ಲದೇ ವಾಟ್ಸಾಪ್, ಇನ್ಸ್ಟಾಗ್ರಾಂನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮಗಳ ಒಡೆತನವನ್ನೂ ಫೇಸ್ಬುಕ್ ಹೊಂದಿದೆ.