ಯುಎಎನ್ 12 ಅಂಕಿಯ ಸಂಖ್ಯೆಯಾಗಿದೆ. ಇದನ್ನು ಇಪಿಎಫ್ಒನಲ್ಲಿ ನೋಂದಾಯಿಸಿದ ಉದ್ಯೋಗಿಗಳಿಗೆ ನೀಡಲಾಗುತ್ತದೆ. ನಿಮ್ಮ ಬಳಿ ಯುಎಎನ್ ಇಲ್ಲದಿದ್ದರೆ ಅಥವಾ ವಿವರ ಮರೆತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸುಲಭವಾಗಿ ನೀವು ಆನ್ಲೈನ್ ನಲ್ಲಿಯೇ ಯುಎಎನ್ ಸಂಖ್ಯೆ ಪಡೆಯಬಹುದು.
ಮೊದಲು ನೌಕರರ ಭವಿಷ್ಯ ನಿಧಿ ಸಂಸ್ಥೆ ವೆಬ್ಸೈಟ್ epfindia.gov.in ಗೆ ಭೇಟಿ ನೀಡಬೇಕು. ನಂತರ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. For Employees >> Member UAN/Online Service (OCS/OTCP) >> Know Your UAN ಹೋಗಿ ಅಲ್ಲಿ ಆಧಾರ್ ನಂಬರ್ ಅಥವಾ ಪಾನ್ ನಂಬರ್ ನಮೂದಿಸಬೇಕು.
ನಂತರ ವೈಯಕ್ತಿಕ ಮಾಹಿತಿ, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಬೇಕು. ನಂತ್ರ ಕ್ಯಾಪ್ಚಾವನ್ನು ನಮೂದಿಸಬೇಕು. ಅಧಿಕೃತ ಪಿನ್ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಇಷ್ಟು ಮಾಡಿದ ನಂತ್ರ ಯುಎಎನ್ ಸಂಖ್ಯೆ ಫೋನ್ ನಂಬರ್ ಗೆ ಬರುತ್ತದೆ. ಉದ್ಯೋಗದಾತ ಯಾವಾಗ ಬೇಕಾದರೂ ಯುಎಎನ್ ಖಾತೆಯನ್ನು ತೆರೆಯಬಹುದು.
ಯುಎಎನ್ ಖಾತೆಯನ್ನು ರಚಿಸಲು ನೀವು https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕಾಗಿದೆ. ನಿಮ್ಮ ಯುಎಎನ್ ಸ್ಥಿತಿ ತಿಳಿಯಿರಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಲಿಂಕ್ ಕ್ಲಿಕ್ ಮಾಡಿದ ನಂತರ, ನಿಮ್ಮ ಯುಎಎನ್ ತಿಳಿಯಿರಿ ಪುಟ ಕಾಣಿಸುತ್ತದೆ. ಅಲ್ಲಿ ರಾಜ್ಯ ಮತ್ತು ಇಪಿಎಫ್ಒ ಕಚೇರಿ ಆರಿಸಬೇಕಾಗುತ್ತದೆ.
ಅಲ್ಲಿ ಪಿಎಫ್ ಸಂಖ್ಯೆ, ಸದಸ್ಯರ ಐಡಿ, ಫೋನ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ವಿವರಗಳನ್ನು ನಮೂದಿಸಬೇಕು. ಸಂಬಳದ ಸ್ಲಿಪ್ನಲ್ಲಿ ಪಿಎಫ್ ಸಂಖ್ಯೆ, ಸದಸ್ಯರ ಐಡಿ ಇರುತ್ತದೆ. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಅಧಿಕೃತ ಪಿನ್ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಮೂದಿಸಿದ ಮೊಬೈಲ್ ಸಂಖ್ಯೆಯಲ್ಲಿ ಪಿನ್ ಬರುತ್ತದೆ. ಪಿನ್ ನಮೂದಿಸಿ ಮತ್ತು Validate OTP and get UAN ಬಟನ್ ಕ್ಲಿಕ್ ಮಾಡಿ. ಯುಎಎನ್ ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ,
ಪಿಎಫ್ ಹೂಡಿಕೆಯ ವಿವರಗಳನ್ನು ತಿಳಿದುಕೊಳ್ಳಲು ಅಥವಾ ಅದನ್ನು ವಾಪಸ್ ಪಡೆಯಲು ಯುಎಎನ್ ಬೇಕಾಗುತ್ತದೆ.