ಎಸ್ ಬಿ ಐ ತನ್ನ ಗ್ರಾಹಕರಿಗೆ ಮೊಬೈಲ್ ಸಂಖ್ಯೆ ಬದಲಿಸಲು ಮೂರು ಆಯ್ಕೆಗಳನ್ನು ನೀಡುತ್ತಿದೆ. ಅದ್ರಲ್ಲಿ ಒನ್ ಟೈಮ್ ಪಾಸ್ವರ್ಡ್ ಕೂಡ ಒಂದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದು,ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದರೆ, ತಕ್ಷಣ ಇಂಟರ್ನೆಟ್ ಸಹಾಯದಿಂದ ಮೊಬೈಲ್ ನಂಬರ್ ನವೀಕರಿಸಬಹುದು.
ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಎಸ್ಬಿಐ ಆನ್ಲೈನ್ ಸೌಲಭ್ಯ ಸಹಾಯ ಮಾಡಲಿದೆ. ಮೊಬೈಲ್ ಸಂಖ್ಯೆಯನ್ನು ಆನ್ಲೈನ್ನಲ್ಲಿ ಬದಲಾಯಿಸಲು, ಎಟಿಎಂ ಅಥವಾ ಡೆಬಿಟ್ ಕಾರ್ಡ್ ಅಥವಾ ಸಕ್ರಿಯ ಮೊಬೈಲ್ ಸಂಖ್ಯೆ ಅಗತ್ಯವಿದೆ. ಒನ್ ಟೈಮ್ ಪಾಸ್ವರ್ಡ್ ಮೂಲಕ ಮೊಬೈಲ್ ಸಂಖ್ಯೆ ನವೀಕರಿಸಲು ಮೊದಲು ಎಸ್ಬಿಐ ವೆಬ್ಸೈಟ್ ಗೆ ಹೋಗಬೇಕು.
ವೆಬ್ಸೈಟ್ ಬಲ ಭಾಗದಲ್ಲಿ ಮೈ ಅಕೌಂಟ್ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ. ವೈಯಕ್ತಿಕ ವಿವರಗಳು/ ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಪ್ರೊಫೈಲ್ ಪಾಸ್ವರ್ಡ್ ಬಟನ್ ಕ್ಲಿಕ್ ಮಾಡಿ. ನಂತ್ರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಲಿಂಕ್ ಕ್ಲಿಕ್ ಮಾಡಿ. ವೈಯಕ್ತಿಕ ವಿವರಗಳು-ಮೊಬೈಲ್ ಸಂಖ್ಯೆ ನವೀಕರಣ ಕಾಣಿಸುತ್ತದೆ. ಅಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ, ನಂತರ ನಿಮ್ಮ ಹಳೆ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ, ಸಲ್ಲಿಸಿ. ನಂತ್ರ ಮೊಬೈಲ್ ಸಂಖ್ಯೆ ಬದಲಾಯಿಸಲು ಮೂರು ವಿಧಗಳಲ್ಲಿ ಯಾವುದನ್ನು ಬಳಸುತ್ತೀರಿ ಎಂದು ಕೇಳಲಾಗುತ್ತದೆ. ಅದ್ರಲ್ಲಿ ಒಟಿಪಿ, ಎಟಿಎಂ/ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಸಂಪರ್ಕ ಕೇಂದ್ರದ ಮೂಲಕ ಎಂಬ ಮೂರು ಆಯ್ಕೆಯಿರುತ್ತದೆ.
ನಿಮ್ಮ ಬಳಿ ಹಳೆ ಹಾಗೂ ಹೊಸ ಎರಡೂ ಮೊಬೈಲ್ ನಂಬರ್ ಇದ್ದಲ್ಲಿ ನೀವು ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಅಲ್ಲಿ ತಿಳಿಸಿದಂತೆ ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಬೇಕು. ನಂತ್ರ ನಿಮ್ಮ ಎರಡೂ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು 4 ಗಂಟೆಗಳೊಳಗೆ ಎಸ್ ಎಂಎಸ್ ಮಾಡಬೇಕು. 8 ಅಂಕಿಗಳ ಒಟಿಪಿ ನಂಬರ್> < 14 ಅಂಕಿಯ ರೆಫರೆನ್ಸ್ ನಂಬರ್ > ಇದನ್ನು 567676ಗೆ ಎಸ್ಎಂಎಸ್ ಮಾಡಬೇಕು. ಇದನ್ನು ಪರಿಶೀಲಿಸಿದ ನಂತ್ರ ಹೊಸ ಮೊಬೈಲ್ ಸಂಖ್ಯೆ ಖಾತೆಗೆ ಲಿಂಕ್ ಆಗಲಿದೆ.