ಕೊರೊನಾ ವೈರಸ್ ದಾಳಿ ಬಳಿಕ ಜನರು ಜೀವ ನಿರೋಧಕ ಶಕ್ತಿಗಳನ್ನ ಹೆಚ್ಚಿಸುವ ಆಹಾರ ಪದಾರ್ಥಗಳ ಕಡೆಗೆ ಒಲವು ತೋರುತ್ತಿದ್ದಾರೆ. ಇದನ್ನರಿತ ಚೆನ್ನೈನ ಸ್ಟಾರ್ ಹೋಟೆಲ್ ಗಳು ತಮ್ಮ ಮೆನುವಿನಲ್ಲಿ ರಾಗಿ-ಬಾದಾಮಿ ಕೇಕ್, ಬೆಲ್ಲದ ಕೇಕ್, ಪಂಚ ಧಾನ್ಯಗಳ ಕಿಚಡಿ ಸೇರಿದಂತೆ ತರಹೇವಾರಿ ಇಮ್ಯೂನಿಟಿ ಬೂಸ್ಟರ್ ಪದಾರ್ಥಗಳನ್ನ ಸೇರಿಸಿಕೊಂಡಿವೆ.
ಕರೊನಾ ವಿರುದ್ಧ ಹೋರಾಡಲಿಕ್ಕೋಸ್ಕರ ಜನರಿಗೆ ಈ ರೀತಿಯ ಹೊಸ ಆಹಾರ ಪದಾರ್ಥಗಳನ್ನ ನೀಡುತ್ತಿದ್ದೇವೆ ಅಂತಾರೆ ಸ್ಟಾರ್ ಹೋಟೆಲ್ಗಳ ಬಾಣಸಿಗರು.
ಸೆಣಬಿನ ಬೀಜಗಳಲ್ಲಿ ಅಗಾಧ ಪೋಷಕಾಂಶಗಳು ಅಡಗಿವೆ. ಆದರೆ ಇದನ್ನ ಬಳಕೆ ಮಾಡುವವರೇ ಇಲ್ಲ ಎಂಬಂತಾಗಿದೆ. ಹೀಗಾಗಿ ಈ ಧಾನ್ಯಗಳನ್ನ ಬಳಸಿ ಪಾಸ್ತಾ ಹಾಗೂ ಬ್ರೆಡ್ಗಳನ್ನ ತಯಾರಿ ಮಾಡಿ ಮಾರಾಟ ಮಾಡುತ್ತಿದ್ದೇವೆ ಅಂತಾ ಹೋಟೆಲ್ ಮಾಲೀಕ ಗೋಪಿ ತಂಗರಾಜ್ ಹೇಳಿದ್ರು.